ಶಿರಸಿ: ಬಹುಕಾಲದ ಬೇಡಿಕೆಯಾದ ಶಿರಸಿ ಡೇರಿ ಹಾಗೂ ಹಾಲು ಪ್ಯಾಕಿಂಗ್ ಘಟಕ ತಾಲೂಕಿನ ಹನ್ಮಂತಿಯಲ್ಲಿ ಲೋಕಾರ್ಪಣೆಗೆ ಸಜ್ಜಾಗಿದೆ.
ರವಿವಾರ ಪ್ಯಾಕಿಂಗ್ ಘಟಕದಲ್ಲಿ ಸುದ್ದಿಗೋಷ್ಟಿ ನಡೆಸಿ, ಕರ್ನಾಟಕ ಸಹಕಾರ ಹಾಲು ಮಹಾಮಂಡಲ, ಧಾರವಾಡ ಹಾಲು ಒಕ್ಕೂಟ ಏ.5ರಂದು ಬೆಳಿಗ್ಗೆ 11ಕ್ಕೆ ರಾಜ್ಯದಲ್ಲೇ ಮೊದಲನೇಯ ಸಾರ್ವಜನಿಕ ಸಹಭಾಗಿತ್ವದ ಪ್ಯಾಕಿಂಗ್ ಘಟಕ ಲೋಕಾರ್ಪಣೆ ಆಗುತ್ತಿದೆ ಎಂದರು.
1946ರಲ್ಲಿ ನಾಲ್ಕು ಜಿಲ್ಲೆಗೆ ಸಂಬಂಧಿಸಿ ಆರಂಭಗೊಂಡ ಧಾರವಾಡ ಹಾಲು ಒಕ್ಕೂಟ ಕಳೆದ ಫೆಬ್ರುವರಿಯಲ್ಲಿ ಹಾವೇರಿ ಪ್ರತ್ಯೇಕ ಆರಂಭಗೊಂಡಿದೆ. ೬೨೫ ಹಾಲು ಸಂಘ ಒಳಗೊಂಡಿದ್ದು, ನಿತ್ಯ ಸರಾಸರಿ 1.30 ಲ. ಕೇಜಿ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ. 1.5 ಲ.ಲೀ. ದ್ರವ ರೂಪದಲ್ಲಿ, 20 ಸಾ.ಕೇಜಿ ಮೊಸರಿನಲ್ಲಿ, 5 ಸಾ.ಲೀ ಹಾಲನ್ನು ಹಾಲಿನ ಉತ್ಪನ್ನವಾಗಿ ಮಾರಾಟ ಮಾಡಲಾಗುತ್ತಿದೆ ಎಂದರು.
ಉತ್ತರ ಕನ್ನಡದಲ್ಲಿ 265 ಹಾಲು ಸಂಘಗಳಿವೆ.277,425 ಸದಸ್ಯರಿಂದ 45 ಸಾವಿರ ಕೆ.ಜಿ ಹಾಲು ಸಂಗ್ರಹಿಸಲಾಗಿದೆ. ೪೦ ಸಾ.ಲೀ ಹಾಲನ್ನು ದ್ರವ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. 5 ಕೆಜಿ ಮೊಸರು ಮಾಡಲಾಗುತ್ತದೆ. ಪ್ರತೀ ವರ್ಷ 2.50 ಕೋ.ರೂ. ಹಾಲಿನ ಪ್ಯಾಕಿಂಗ್ ಸಾಗಾಟಕ್ಕೆ ಖರ್ಚು ಮಾಡಲಾಗುತ್ತಿತ್ತು. ಸಾರಿಗೆ ವೆಚ್ಚ ತಗ್ಗಿಸಲು ಹಾಗೂ ಅತಿ ಶೀಘ್ರ ಗ್ರಾಹಕರಿಗೆ ನೆರವಾಗಲು ಈ ಘಟಕ ಅನುಕೂಲ ಆಗಲಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಈ ಘಟಕ 50 ಸಾ.ಲೀ.ಪ್ಯಾಕಿಂಗ್ ಮಾಡಬಹುದು ಹಾಗೂ 1 ಲ.ಲೀಗೂ ವಿಸ್ತರಿಸಬಹುದಾಗಿದೆ ಎಂದು ಹೇಳಿದರು.
ಏ.5ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನೆ ಮಾಡಲಾಗುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಪ್ರಭು ಚೌಹ್ಹಾಣ, ಸಿ.ಸಿ.ಪಾಟೀಲ, ಆಚಾರ ಹಾಲಪ್ಪ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಹಿಸಿಕೊಳ್ಳುವರು ಎಂದರು.
ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಲೋಹಿತೇಶ್ವರ, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಂಕರ ಹೆಗಡೆ ಇತರರು ಇದ್ದರು.