Advertisement

ಶಿರಸಿ ಜಿಲ್ಲೆಗೆ ಆಗ್ರಹಿಸಿ ನಾಳೆ ಬಂದ್‌

05:29 PM Feb 23, 2021 | Team Udayavani |

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಒತ್ತಾಯಿಸಿ ಫೆ. 24ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 2 ರವರೆಗೆ ಶಿರಸಿ ಬಂದ್‌ ಕರೆ ಕೊಡಲಾಗಿದೆ. ಈಗಲೂ ಪ್ರತ್ಯೇಕ ಜಿಲ್ಲೆ ಆಗದಿದ್ದರೆ ಇನ್ಯಾವಾಗ ಎಂದು ಕೇಳಬೇಕಾಗಿದೆ. ಈ ಕಾರಣದಿಂದ ಸಾರ್ವಜನಿಕರು ಸಹಕಾರ ನೀಡಿ ಬಂದ್‌ ಯಶಸ್ವಿಗೊಳಿಸುವಂತೆ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮನವಿ ಮಾಡಿದರು.

Advertisement

ಘಟ್ಟದ ಮೇಲಿನ ಎಲ್ಲ ತಾಲೂಕಿನ ಬಂಧುಗಳು ಅಂದಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಅಭಿವೃದ್ಧಿ ಮತ್ತು ಅನುಕೂಲಕ್ಕಾಗಿ ಎಂಬ ಘೋಷವಾಖ್ಯದೊಂದಿಗೆ ಶಿರಸಿ ಜಿಲ್ಲೆ ಆಗಲೇಬೇಕು ಎಂದುಒಕ್ಕೊರಲ ಧ್ವನಿಯೊಂದಿಗೆ ಸರ್ಕಾರದ ಗಮನ ಸೆಳೆಯಲಾಗುವುದು. ಈಗಾಗಲೇ ಹಿಂದೂ ಧಾರ್ಮಿಕ ಕೇಂದ್ರಗಳು, ಮಸೀದಿ, ಚರ್ಚ್‌ಹಾಗೂ ಸಂಘ-ಸಂಸ್ಥೆಗಬೆಂಬಲ ಕೋರಲಾಗಿದೆ. 24 ರ  ಹೋರಾಟದ ಯಶಸ್ಸಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ಶಿರಸಿಯ ಅಂಗಡಿ – ಮುಗ್ಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಿ ಸಹಕಾರ ನೀಡುವಂತೆ ಕೋರಿದರು.

ಅಂದು ಬೆಳಗ್ಗೆ 10 ಗಂಟೆಗೆ ನಗರದ ಅಂಚೆ ವೃತ್ತದಿಂದ ಸಾರ್ವಜನಿಕ ಮೆರವಣಿಗೆ ನಡೆಯಲಿದೆ. ಹುಬ್ಬಳ್ಳಿ ರಸ್ತೆ ಮೂಲಕ ಮಾಡಿಗುಡಿ, ಶಿವಾಜಿಚೌಕ, ಸಿ.ಪಿ.ಭಜಾರ್‌ ಮೂಲಕ ಎಸಿ ಕಚೇರಿಗೆ ತೆರಳಿ ಸರಕಾರಕ್ಕೆ ಮನವಿಸಲ್ಲಿಸಲಾಗುತ್ತದೆ. ಅಂದು ಹಾಲು,ಔಷಧ, ಬಸ್‌ ಸೇವೆಗಳು, ಅಂಬುಲೆನ್ಸ, ಆಸ್ಪತ್ರೆಗಳು ಈ ಬಂದ್‌ನಿಂದಮುಕ್ತವಾಗಲಿದೆ ಎಂದ ಅವರು, ಈಹೋರಾಟ ಕೇವಲ ಶಿರಸಿಯದ್ದಲ್ಲ, ನಗರದ, ಗ್ರಾಮೀಣ ಬೇಧವಿಲ್ಲ.ಎಲ್ಲರೂ ಪಾಲ್ಗೊಂಡು ಜನರಿಗೆ ಜಿಲ್ಲಾ ಕೇಂದ್ರದ ಅಂತರ ಕಡಿಮೆ ಮಾಡುವುದೇ ನಮ್ಮ ಗುರಿ. ಈ ಕಾರಣದಿಂದ ಶಿರಸಿಗೆಪ್ರತ್ಯೇಕ ಜಿಲ್ಲಾ ಸ್ಥಾನ ಮಾನ ಹಾಗೂ ಬನವಾಸಿಗೆ ತಾಲೂಕು ಮಾನ್ಯತೆ ನೀಡುವುದಾಗಿದೆ ಎಂದರು.

ಈ ವೇಳೆ ಸಮಿತಿಯ ಎಂ.ಎಂ.ಭಟ್ಟ ಕಾರೇಕೊಪ್ಪ, ರಘು ಕಾನಡೆ, ಪರಮಾನಂದ ಹೆಗಡೆ, ವಿನಾಯಕ ಆಚಾರಿ, ಪ್ರಮುಖರಾದ ನಂದಕುಮಾರ ಜೋಗಳೇಕರ್‌, ಮಾದೇವ ಚಲವಾದಿ, ಅರ್ಚನಾ ಶಿರಾಲಿ, ಪ್ರದೀಪ ಅಳ್ಳೊಳ್ಳಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next