Advertisement

ಶಿರಹಟ್ಟಿ: ದ್ಯಾಮವ್ವ ದೇವಿ ಅದ್ಧೂರಿ ಮೆರವಣಿಗೆ

06:02 PM Jan 29, 2021 | Team Udayavani |

ಶಿರಹಟ್ಟಿ: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರಾ ಮಹೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ದ ವಿಯನ್ನು ತವರು ಮನೆಯಿಂದ ಗಂಡನ ಮನೆಗೆ ಕಳುಹಿಸಿಕೊಡುವ ಸಂಪ್ರದಾಯದಂತೆ ಪಟ್ಟಣದ ಬಡಿಗೇರಿ ಓಣಿಯಿಂದ ಶ್ರೀ ದೇವಿಯ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

Advertisement

ಮೆರಣಿಗೆಯಲ್ಲಿ ಗಜರಾಜ, ವಾದ್ಯಮೇಳ ಮತ್ತು ನಂದಿಕೋಲು ಮತ್ತು ಪುರವಂತರಿಂದ ಒಡಪುಗಳು ಮೊಳಗಿದವು. ಮೆರವಣಿಗೆಯಲ್ಲಿ ಕಹಳೆ ನಿನಾದ ಕೇಳುವಂತಿತ್ತು. ಪಟ್ಟಣದ ಎಲ್‌.ವ್ಹಿ.ಕುಸಲಾಪೂರ ಪುರವಂತರು ದೇವಿ ಒಡಪುಗಳನ್ನು ಹೇಳುವ ಮೂಲಕ ಭಕ್ತಿ ಸಮರ್ಪಣೆ ಮಾಡಿ ಮೆರವಣಿಗೆಗೆ ಕಳೆ ತಂದರು.

ಇದನ್ನೂ ಓದಿ:ನ್ಯೂಜಿಲ್ಯಾಂಡ್ ದೇಶದ ಪರವಾಗಿ ಆಡಿದ ಭಾರತೀಯ ಮೂಲದ ಆಟಗಾರರಿವರು..!

ಪಟ್ಟಣದ ಸಮಸ್ತ ಜನತೆ ದೇವಿಯನ್ನು ಬಡಿಗೇರ ಓಣಿಯಿಂದ ಮಧ್ಯಾಹ್ನ 12 ಗಂಟೆಗೆ ಕೋಟೆ ಓಣಿಯಲ್ಲಿರುವ ದೇವಿಯ ದೇವಸ್ಥಾನಕ್ಕೆ ಕರೆತಂದು ಸಾಯಂಕಾಲದವರೆಗೆ ದೇವಿಯ ದರ್ಶನ ಪಡೆದರು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿ ಉಡಿ ತುಂಬಿ ಹರಕೆ ತೀರಿಸಿ ಧನ್ಯತಾ ಭಾವ ಮೆರದರು. ಅಲ್ಲದೇ, ದೇವಿ ಮಹಾಪ್ರಸಾದ ಸ್ವೀಕರಿಸಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next