Advertisement

Shiradi : ಕಾಂಕ್ರೀಟ್‌ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು!

11:07 PM Dec 26, 2023 | Team Udayavani |

ಬಂಟ್ವಾಳ: ಕರಾವಳಿ ಜಿಲ್ಲೆಗಳಿಗೆ ರಾಜಧಾನಿ ಬೆಂಗಳೂರು ಸಂಪರ್ಕದ ಹೆಬ್ಟಾಗಿಲು ಎಂದೇ ಕರೆಯಲ್ಪಡುವ ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿ ಘಾಟಿ ರಸ್ತೆ ಸದಾ ಒಂದಿಲ್ಲೊಂದು ಸಮಸ್ಯೆಗಳಿಂದ ಸುದ್ದಿಯಾಗುತ್ತಿದೆ. ಇದೀಗ ಘಾಟಿಯ ಕಾಂಕ್ರೀಟ್‌ ರಸ್ತೆಯ ಹೊಂಡಗಳು ಅಪಾಯವನ್ನು ಆಹ್ವಾನಿಸುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಶಿರಾಡಿ ಘಾಟಿ ರಸ್ತೆಯ ಹೆಗ್ಗದ್ದೆ ಬಳಿ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಮಂಗಳೂರಿನ ಕಡೆಗೆ ಸುಮಾರು 300 ಮೀಟರ್‌ ದೂರದಲ್ಲಿ ಸೇತುವೆಯ ಮೇಲೆ ಕಾಂಕ್ರೀಟ್‌ ಕಿತ್ತುಹೋಗಿದ್ದು, ಒಳಭಾಗದಲ್ಲಿ ಅಳವಡಿಸಿರುವ ಸರಳುಗಳು ಕಾಣಿಸುತ್ತಿವೆ. 2 ಕಿ.ಮೀ. ಅಂತರದಲ್ಲಿ ಬೆಂಗಳೂರು ಭಾಗದ ರಸ್ತೆಯಲ್ಲೂ ಅದೇ ರೀತಿಯ ಹೊಂಡಗಳು ಸೃಷ್ಟಿಯಾಗಿವೆ.

ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳು ತುರ್ತು ಗಮನಹರಿಸಬೇಕಾದ ಅಗತ್ಯವಾಗಿದ್ದು, ಇಲ್ಲದೇ ಇದ್ದರೆ ಸೇತುವೆಗೂ ಅಪಾಯ ಉಂಟಾಗುವ ಸಾಧ್ಯತೆಯ ಕುರಿತು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಮಸ್ಯೆಗಳ ಕುರಿತು ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಕಾಳಜಿ ತೋರುತ್ತಿದ್ದಾರೆ. ಆದರೆ ಅದೇ ಹೆದ್ದಾರಿಯ ಮೂಲಕ ಸಂಚರಿಸುವ ಜನಪ್ರತಿನಿಧಿಗಳು ಮಾತ್ರ ಗಮನಹರಿಸುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿವೆ.

ಸೇವ್‌ ಎನ್‌ಎಚ್‌75 ಅಭಿಯಾನ
ಈ ಸಮಸ್ಯೆಯ ಪರಿಹಾರಕ್ಕಾಗಿ ಇದೀಗ ಹೆದ್ದಾರಿ ಬಳಕೆದಾರರು “ಸೇವ್‌ ಎನ್‌ಎಚ್‌75′ ಹ್ಯಾಷ್‌ಟ್ಯಾಗ್‌ ಆರಂಭಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಈ ರೀತಿಯ ಟ್ವೀಟ್‌ ಅಭಿಯಾನಗಳು ಜೋರಾಗಿ ನಡೆದು ಸಂಬಂಧಪಟ್ಟವರನ್ನು ತಲುಪಿದಾಗಲೇ ಸಮಸ್ಯೆ ಪರಿಹಾರವನ್ನು ಕಾಣಲು ಸಾಧ್ಯ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next