Advertisement
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023-24ರ ಚುನಾವಣೆ ಹೊತ್ತಿಗೆ ದೊಡ್ಡ ರಾಜಕೀಯ ಧ್ರುವೀಕರಣವಾಗಲಿದೆ. ಪಂಚ ರಾಜ್ಯ ಚುನಾವಣೆ ಫಲಿತಾಂಶವೇ ಇದಕ್ಕೆ ಮುನ್ನಡಿ ಬರೆದಿದೆ ಎಂದು ಹೇಳಿದರು.
Related Articles
Advertisement
ನೀಟ್, ರಾಜ್ಯಗಳ ಒಂದೊಂದು ನಿಲುವು ಸಲ್ಲದು :
ನೀಟ್ ಕುರಿತು ಒಂದೊಂದು ರಾಜ್ಯಗಳ ಒಂದೊಂದು ನಿಲುವು ಸಲ್ಲದು, ತಮಿಳುನಾಡಲ್ಲಿ ನೀಟ್ ನಿರ್ಬಂಧಿಸಿದ್ದಾರೆ. ಒಂದು ರಾಜ್ಯ ಒಂದು ನಿಲುವು, ಇನ್ನೊಂದು ರಾಜ್ಯ ಇನ್ನೊಂದು ನಿಲುವು ತೆಗೆದು ಕೊಂಡರೆ ಶಿಕ್ಷಣ ವ್ಯವಸ್ಥೆ ಹಾಳಾಗುತ್ತದೆ. ದೇಶದ ಎಲ್ಲಾ ಮಕ್ಕಳಿಗೂ ಅವಕಾಶ ಸಿಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ತೀರ್ಮಾನ ಮಾಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೂ ಮುನ್ನ ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದರು.
ತುಮಕೂರು ವಿವಿ ಕ್ಯಾಂಪಸ್ ವಿಳಂಬ : ತುಮಕೂರು ವಿವಿ ಕ್ಯಾಂಪಸ್ ನಿರ್ಮಾಣ ವಿಳಂಬ ವಾಗುತ್ತಿದೆ. ಈ ಸರ್ಕಾರಕ್ಕೆ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವುದೇ ಗೊತ್ತಿಲ್ಲ ಎಂದು ಪತ್ರ ಕರ್ತರ ಪ್ರಶ್ನೆಗೆ ಉತ್ತರಿಸಿದ ಟಿ.ಬಿ.ಜಯ ಚಂದ್ರ, ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕ್ಯಾಂಪಸ್ ಜಾಗದ ಸಮಸ್ಯೆ ಇತ್ಯರ್ಥಗೊಳಿಸಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಮೂಲ ಸೌಕರ್ಯವೆಂದರೆ ಬರೀ ಕಟ್ಟಡವೆಂದು ಈ ಸರ್ಕಾರ ಭಾವಿಸಿದೆ. ಶಿರಾ ಗೇಟ್ ಹಾಗೂ ಶಿರಾದಲ್ಲಿ ಉದ್ಘಾಟನೆಗೊಂಡ ಪಶುಸಂಗೋಪನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾಚರಣೆ ಮಾಡ್ತಿಲ್ಲ. ಈ ಸರ್ಕಾರಕ್ಕ ಆದ್ಯತೆ ಕಾರ್ಯ ಕ್ರಮಗಳ್ಯಾವುವು ಗೊತ್ತಿಲ್ಲ ಎಂದರು.
ಗಣತಿ ವರದಿ ಆಧಾರದಲ್ಲಿ ಮೀಸಲು ಕಾನೂನು ಬದ್ಧಗೊಳಿಸಿ : ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಸರ್ಕಾರಿ ಅಧಿಕಾರಿಗಳಿಂದಲೇ ತಯಾರಿಸಲ್ಪಟ್ಟ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಗಣತಿ ವರದಿಯನ್ನು ಬಿಡುಗಡೆ ಮಾಡಿ ಅದರ ಆಧಾರದಲ್ಲೇ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲನ್ನು ಕಾನೂನು ಬದ್ಧಗೊಳಿಸಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. 3-4 ವಿಭಾಗ ಗಳಲ್ಲಿ ಕೋರ್ಟ್ ಸೂಚಿಸಿದ ಮೌಲ್ಯಮಾಪನ ವನ್ನು ಗಣತಿಯಲ್ಲಿ ಮಾಡಲಾಗಿದೆ. ಸುಮಾರು 200 ಕೋಟಿ ಖರ್ಚು ಮಾಡಿ ತಯಾರಿಸಿರುವ ಗಣತಿ ವರದಿಯನ್ನು 2018ರಲ್ಲಿ ಚುನಾ ವಣೆಯ ಕಾರಣಕ್ಕೆ ಬಹಿರಂಗಗೊಳಿಸಲಾಗಲಿಲ್ಲ. ಈಗ ಸರ್ಕಾರದ ಮುಂದೆ ವರದಿ ಇದೆ. ವರದಿ ಆಧರಿಸಿ ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗಗಳಿಗೂ ಕಲ್ಪಿಸಲಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಸುಪ್ರೀಂಕೋರ್ಟ್‌ನಲ್ಲಿರುವ ಹಿಂದು ಳಿದ ವರ್ಗಗಳ ಮೀಸಲು ತಕರಾರನ್ನೇ ಮುಂದು ಮಾಡಿ ರಾಜ್ಯ ಸರ್ಕಾರ ಜಿಪಂ ತಾಪಂ ಚುನಾವಣೆಯನ್ನು ವಿಳಂಬ ಮಾಡಿದ್ದು, ನೇರ ಭ್ರಷ್ಟಾಚಾರಕ್ಕೆ ವೇದಿಕೆ ನಿರ್ಮಿಸಿದೆ. -ಟಿ.ಬಿ.ಜಯಚಂದ್ರ, ಮಾಜಿ ಸಚಿವ