ಪುರಾಣದ ಮೊಟ್ಟಮೊದಲ ಟ್ರಾನ್ಸ್ ಕ್ಯಾರೆಕ್ಟರ್ “ಶಿಖಂಡಿ’ ಹೆಸರಿನಲ್ಲೇ ಒಂದು ನಾಟಕ ಪ್ರದರ್ಶನ ಕಾಣುತ್ತಿದೆ. ಪಜಾ ಜಲಾಲಿ ರಚಿಸಿ, ನಿರ್ದೇಶಿಸಿದ, ಮುಂಬೈನ ಫಾಟ್ಸ್ ದಿ ಆರ್ಟ್ಸ್ ತಂಡ ಕಟ್ಟಿಕೊಡುತ್ತಿರುವ ಇಂಗ್ಲಿಷ್ ನಾಟಕವಿದು. ಹೆಣ್ಣಾಗಿ ಹುಟ್ಟಿ, ಗಂಡಾಗಿ ಬೆಳೆದು, ಯಕ್ಷನಿಂದ ಲಿಂಗ ಪರಿವರ್ತನೆ ಮಾಡಿಕೊಂಡು, ಕಡೆಗೂ ಭೀಷ್ಮನ ಸಾವಿಗೆ ಕಾರಣವಾಗುವ ಮೂಲಕ ಆಕೆಯ ಹುಟ್ಟಿಗೆ ಒಂದು ಸಾರ್ಥಕತೆ ಕಾಣುವುದು ಪೌರಾಣಿಕ ಕತೆ.
ಶಿಖಂಡಿಯ ಕತೆಯನ್ನು ಇಲ್ಲಿ ಹಾಸ್ಯದ ಮೂಲಕ, ಪುರಾಣ ಮತ್ತು ಸಮಕಾಲೀನ ತಲ್ಲಣಗಳನ್ನು ಉಪಮೆ ಮಾಡುತ್ತಾ, ಪ್ರಸ್ತುತಪಡಿಸುತ್ತಾರೆ ನಿರ್ದೇಶಕರು. ಗಂಡುತನ ಮತ್ತು ಹೆಣ್ಣುತನಗಳ ನಡುವೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾರೆ. ಸಿಜಿಕೆ ರಂಗೋತ್ಸವದಲ್ಲಿ ಈ ನಾಟಕ ಪ್ರದರ್ಶನ ಕಾಣುತ್ತಿದೆ.
ಯಾವಾಗ?: ಏ.30, ಸೋಮವಾರ, ಸಂ.7
ಎಲ್ಲಿ?: ರವೀಂದ್ರ ಕಲಾಕ್ಷೇತ್ರ