Advertisement
ತುಳು ಪ್ರೇಮಮಾಧ್ಯಮದವರೊಂದಿಗೆ ಮತ್ತು ಸಮಾರಂಭದಲ್ಲಿ ನಡುನಡುವೆ ತುಳು ವಿನಲ್ಲಿ ಮಾತನಾಡಿದರು. “ಯಾನ್ ಕುಡ್ಲದಾಲ್’ ಎಂದೇ ಮಾತು ಆರಂಭಿಸಿ “ಮಾತೆರೆಗ್ಲಾ ಎನ್ನ ನಮಸ್ಕಾರ’ ಎಂದರು, ಭಾಷಣದ ನಡುವೆ ಆಗಾಗ ತುಳು ಸೇರಿಸಿಕೊಂಡರು.
ಶಿಲ್ಪಾ ಶೆಟ್ಟಿ ಮುಂಬಯಿಯ ಕಾರ್ಯಕ್ರಮಗಳಲ್ಲೂ ಪೆಲಕಾಯಿ ಗಟ್ಟಿಯ ಉಲ್ಲೇಖೀಸುತ್ತಾರೆ ಎಂದು ಕಾರ್ಯಕ್ರಮ ನಿರೂಪಕರು ಹೇಳಿದಾಗ, “ಅಂದ್ ಎಂಕ್ ಪೆಲಕಾಯಿದ ಗಟ್ಟಿ, ಕೋರಿ ರೊಟ್ಟಿ ಇಷ್ಟ. ಇತ್ತೆ ಉಂಡಾ?’ ಎಂದು ಕೇಳಿದರು. “ನನೊಂಜಿ ಸರ್ತಿ ಬನ್ನಗ ಖಂಡಿತ ಕೊರ್ಪಾ’ ಎಂದಾಗ ಶಿಲ್ಪಾ ಸಹಿತ ಎಲ್ಲರ ಮುಖದಲ್ಲೂ ನಗು. “ಬ್ಯುಸಿ ಇಷ್ಟ ಪಡುವೆ’
ಕೆಲಸದಲ್ಲಿ ಬ್ಯುಸಿಯಾಗಿರುವುದನ್ನು ಇಷ್ಟಪಡುತ್ತೇನೆ. ಆದರೆ ಮಕ್ಕಳು, ಪತಿ ಮತ್ತು ತಾಯಿಯೊಂದಿಗೆ ಕಳೆಯುವ ಸಮಯವೂ ಇಷ್ಟವೇ ಎಂದು ಮಹಿಳೆಯರ ಜತೆ ಸಂವಾದದಲ್ಲಿ ಹೇಳಿದರು. ಇದು ನನ್ನೂರು. ಇಲ್ಲಿಗೆ ಬರುವುದನ್ನು ಇಷ್ಟಪಡುತ್ತೇನೆ. ಇಂದು ಕೆಎಂಸಿಯವರು ಇಂತಹ ಅವಕಾಶ ವನ್ನು ಮಾಡಿಕೊಟ್ಟಿದ್ದಾರೆ ಎಂದರು.
Related Articles
ಸುಮಾರು 24 ವರ್ಷಗಳ ಹಿಂದೆ ನಟಿಸಿದ್ದ ಶಿಲ್ಪಾ “ಮೈ ಕಿಲಾಡಿ… ತೂ ಅನಾರಿ’ ಚಿತ್ರದ “ಚುರಾ ಕೇ ದಿಲ್ ಮೇರಾ…’ ಗೀತೆಯನ್ನು ಮಾಧ್ಯಮದವರು ನೆನಪಿಸಿದರು. “ನಾನು ಅಂದು ಕೂಡ ಯಾರ ಹೃದಯ ಕದ್ದಿಲ್ಲ. ಇಂದೂ ಇಲ್ಲ’ ಎಂದು ಹಾಸ್ಯಭರಿತವಾಗಿ ಉತ್ತರಿಸಿದರು.
Advertisement
ಕಟೀಲಿಗೆ ಭೇಟಿ; ದೇವಿಯ ದರ್ಶನಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ ಗುರುವಾರ ಸಂಜೆ ನೀಡಿದರು. ದೇಗುಲದ ವತಿಯಿಂದ ಅವರನ್ನು ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು. ಮುಂದಿನ ಜನವರಿಯಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು. 12 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಮುಂಬಯಿ ಸಮಿತಿಯವರು ನೀಡಿದ್ದ ಚಿನ್ನದ ಕೊಡಪಾನದಲ್ಲಿ ಶಿಲ್ಪಾ ಶೆಟ್ಟಿಯವರ ಹೆಸರಿದ್ದು, ಅದನ್ನು ತೋರಿಸಿದಾಗ ಸಂತಸಪಟ್ಟರು. ಸಾಧ್ಯವಾದರೆ ಬ್ರಹ್ಮಕಲಶೋತ್ಸವಕ್ಕೂ ಬರುವುದಾಗಿ ತಿಳಿಸಿದರು. ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಸದಾನಂದ ಆಸ್ರಣ್ಣ, ಮಂಗಳೂರು ಕೆಎಂಸಿಯ ಡಾ| ಸಿಂಧೂ, ನಿತೇಶ್ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.