Advertisement
ಶಿಲ್ಪಾಗೊಂಬೆ ಬಳಗವು 1993, 2005ರಲ್ಲಿ ಶ್ರವಣ ಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕದಲ್ಲಿ ಭಾಗವಹಿಸಿತ್ತು. ಇದೀಗ 2018ರಲ್ಲೂ ಪಾಲ್ಗೊಳ್ಳುತ್ತಿರುವುದು ಮಹತ್ವಪೂರ್ಣ ಎನಿಸಿದೆ.
Related Articles
Advertisement
ಪ್ರಶಸ್ತಿ, ಸಮ್ಮಾನ ಗೊಂಬೆ ಬಳಗವನ್ನು ಹುಟ್ಟುಹಾಕಿ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ ರಮೇಶ್ ಕಲ್ಲಡ್ಕರಿಗೆ ಮೊದಲಿಗೆ ಡಾ| ರಾಜ್‌ಕುಮಾರ್ ರಾಜ್ಯ ಪ್ರಶಸ್ತಿ, ಆರ್ಯ ಭಟ ಪ್ರಶಸ್ತಿ, ಜಾನಪದ ಕಲೆಯಲ್ಲಿ ರಾಜ್ಯೋತ್ಸವ ಮೊದಲಾದ ಪ್ರಮುಖ
ಪ್ರಶಸ್ತಿಗಳ ಜತೆ ಸ್ಥಳೀಯ ಸಂಘಸಂಸ್ಥೆಗಳಿಂದ ಸಮ್ಮಾನ, ಪ್ರಶಸ್ತಿ ಪುರಸ್ಕಾರ ಸಂದಿದೆ. ಅವರ ತಂಡಗಳು ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ, ಮೂಡಬಿದಿರೆಯಲ್ಲಿ ನಡೆದ 71ನೇ ಕ.ಸಾ. ಸಮ್ಮೇಳನ, ಉಡುಪಿ ಪರ್ಯಾಯ, ಮೈಸೂರು ದಸರಾ, ರಾಜ್ಯ ಯುವಜನ ಮೇಳ, ಮಂಗಳೂರು ದಸರಾ, ಆಳ್ವಾಸ್ ನುಡಿಸಿರಿ ಇತ್ಯಾದಿ ಪ್ರತಿಷ್ಠಿತ ಸಮಾ ರಂಭಗಳಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿ ಸಾರ್ವ ಜನಿಕ ಮೆಚ್ಚುಗೆ ಪಡೆದಿದೆ. ಅವರ ತಂಡದಲ್ಲಿ 20ಕ್ಕೂ ಅಧಿಕ ನುರಿತ ಕಲಾವಿದರಿದ್ದಾರೆ. ತರಬೇತಿ ಪಡೆದಿದ್ದೆ
ಪ್ರೌಢ ಶಿಕ್ಷಣ ಮುಗಿದ ಬಳಿಕ ಹಿರಿಯ ಸಹೋದರನ ಜತೆ ಪೈಂಟಿಂಗ್ ತರಬೇತಿ ಪಡೆದಿದ್ದೆ. ಶಿವಮೊಗ್ಗದಲ್ಲಿ ಮುಖವಾಡ ರಚನೆ ಬಗ್ಗೆ ತಿಳಿದು ಅದನ್ನು ಅಭ್ಯಾಸ ಮಾಡಿದೆ. ಪತ್ನಿ ಗೀತಾ, ಪುತ್ರ ನಿತಿನ್ ಕಲ್ಲಡ್ಕ, ಪುತ್ರಿ ರಚನಾ, ಅರ್ಚನಾ ನನ್ನ ಸಾಧನೆಯ ಹಿಂದೆ ತೊಡಗಿಸಿಕೊಂಡವರು. ಹೊಸ ಪರಿಕಲ್ಪನೆ ಬೆಳೆದಂತೆ ನಮ್ಮ ಶಿಲ್ಪಾ ಗೊಂಬೆ ಬಳಗ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯಿತು.
– ರಮೇಶ್ ಕಲ್ಲಡ್ಕ ರಾಜಾ ಬಂಟ್ವಾಳ