Advertisement

Dubai airportನಲ್ಲಿ ತಡೆಹಿಡಿಯಲ್ಪಟ್ಟ ಧವನ್‌ ಪತ್ನಿ, ಮಕ್ಕಳು

04:34 PM Dec 29, 2017 | udayavani editorial |

ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ತಂಡದ ಓಪನರ್‌ ಶಿಖರ್‌ ಧವನ್‌ ಅವರ ಪತ್ನಿ ಮತ್ತು ಮಕ್ಕಳನ್ನು ಕೇಪ್‌ ಟೌನ್‌ಗೆ ಹೋಗುವ ವಿಮಾನಕ್ಕೆ ಲಿಂಕ್‌ ಕಲ್ಪಿಸುವ ವಿಮಾನವನ್ನು ದುಬೈನಲ್ಲಿ  ಎಮಿರೇಟ್‌ ಏರ್‌ ಲೈನ್ಸ್‌ನವರು  ಏರಲು ಬಿಡದೆ ತಡೆ ಹಿಡಿದ ಘಟನೆ ವರದಿಯಾಗಿದೆ.

Advertisement

ಶಿಖರ್‌ ಧವನ್‌ ಅವರ ಕುಟುಂಬಕ್ಕೆ ಮಕ್ಕಳ ಬರ್ತ್‌ ಸರ್ಟಿಫಿಕೇಟ್‌ ತೋರಿಸುವಂತೆ ಎಮಿರೇಟ್‌ ಏರ್‌ ಲೈನ್ಸ್‌ನವರು ಹಠ ಹಿಡಿದರು. ಆ ಸರ್ಟಿಫಿಕೇಟ್‌ ಅವರ ಬಳಿ ಇರಲಿಲ್ಲ. ಹಾಗಾಗಿ ಕೇಪ್‌ ಟೌನ್‌ಗೆ ಹೋಗುವ ವಿಮಾನಕ್ಕೆ ಲಿಂಕ್‌ ಕಲ್ಪಿಸುವ ವಿಮಾನವನ್ನು ಏರಲು ಅವರಿಗೆ ಸಾಧ್ಯವಾಗಲಿಲ್ಲ.

ದಿಲ್ಲಿಯಿಂದ ಸರ್ಟಿಫಿಕೇಟ್‌ಗಳು ಬರುವ ತನಕವೂ ಅವರು ದುಬೈ ವಿಮಾನ ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ಒದಗಿತು. ಇದೀಗ ಸರ್ಟಿಫಿಕೇಟ್‌ ಬಂದಿರುವ ಹಿನ್ನೆಲೆಯಲ್ಲಿ  ಈಗಿನ್ನು ಧವನ್‌ ಅವರ ಪತ್ನಿ ಏಶಾ ಮತ್ತು ಮಕ್ಕಳು ಮುಂದಿನ ವಿಮಾನವನ್ನು ಏರಲಿದ್ದಾರೆ. 

ಎಮಿರೇಟ್ಸ್‌ ಏರ್‌ ಲೈನ್ಸ್‌ ನ ಈ ಪರಿಯ ವೃತ್ತಿಪರತೆಗೆ ತಕ್ಕುದಲ್ಲದ ನಡತೆಯನ್ನು ಧವನ್‌ ತಮ್ಮ ಟ್ವಿಟರ್‌ ಬರಹದಲ್ಲಿ ಖಂಡಿಸಿದರು. 

Advertisement

ದಕ್ಷಿಣ ಆಫ್ರಿಕ ವಿರುದ್ಧದ ಭಾರತ ಕ್ರಿಕೆಟ್‌ ಸರಣಿ ಜನವರಿ 5ರಿಂದ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಅಲ್ಲಿಗೆ ಹೋಗಿರುವ ಭಾರತೀಯ ತಂಡ ನಿನ್ನೆ ಗುರುವಾರ ರಾತ್ರಿ ಕೇಪ್‌ ಟೌನ್‌ ಹೊಟೇಲ್‌ನಲ್ಲಿ ಉಳಿದುಕೊಂಡಿದೆ. ಅಂದ ಹಾಗೆ ನವ ವಿವಾಹಿತ, ನಾಯಕ, ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಜತೆಗೆ ಕೇಪ್‌ ಟೌನ್‌ ಹೊಟೇಲಲ್ಲೇ ವಾಸ್ತವ್ಯವಿದ್ದಾರೆ. 

ಭಾರತದ ದಕ್ಷಿಣ ಆಫ್ರಿಕ ವಿರುದ್ಧ ಮೂರು ಟೆಸ್ಟ್‌ ಪಂದ್ಯಗಳು, ಆರು ಏಕದಿನ ಪಂದ್ಯಗಳು ಮತ್ತು ಮೂರು ಟಿ-20 ಪಂದ್ಯಗಳನ್ನು ಒಟ್ಟು 56 ದಿನಗಳ ಪ್ರವಾಸ ಕಾಲಯದಲ್ಲಿ ಆಡಲಿದೆ. ಇದಕ್ಕೆ ಮುನ್ನ ತರಬೇತಿ ಶಿಬಿರವೊಂದು ಅಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next