Advertisement

ಶಿಖರ್‌ ಧವನ್‌ ಕಬಡ್ಡಿ ಶೈಲಿ ಸಂಭ್ರಮ: ರಹಸ್ಯ ಬಯಲು!

08:40 AM Jun 04, 2018 | |

ಹೊಸದಿಲ್ಲಿ: ಭಾರತದ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಪ್ರತಿ ಪಂದ್ಯದಲ್ಲೂ ಕ್ಯಾಚ್‌ ಹಿಡಿದಾಗ ಕಬಡ್ಡಿ ಶೈಲಿಯಲ್ಲಿ ತೊಡೆ ತಟ್ಟಿ ಸಂಭ್ರಮಿಸುವುದನ್ನು ನೋಡಿದ್ದೇವೆ. ಈ ಸಂಭ್ರಮಕ್ಕೆ ಕಾರಣವೇನು ಎಂಬುದನ್ನು ಸ್ವತಃ ಧವನ್‌ ಖಾಸಗಿ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Advertisement

“ಆಸ್ಟ್ರೇಲಿಯ ಸರಣಿಗೆ ತೆರಳಿದ್ದಾಗ ಶೇನ್‌ ವಾಟ್ಸನ್‌ ಕ್ಯಾಚ್‌ ಹಿಡಿದಿದ್ದೆ. ಮೊದಲು ಕಬಡ್ಡಿ ಶೈಲಿ ಸಂಭ್ರಮ ಆರಂಭಿಸಿದ್ದು ಆಗಲೇ. ಇದಾದ ಬಳಿಕ ಇದೇ ಶೈಲಿಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಕಬಡ್ಡಿ ನೋಡುವುದೆಂದರೆ ನನಗೆ ತುಂಬಾ ಇಷ್ಟ. ಕಬಡ್ಡಿ ಹೆಚ್ಚಿನ ಮನೋರಂಜನೆ ನೀಡುತ್ತದೆ. ಜನರು ಕೂಡ ನನ್ನ ಈ ಸಂಭ್ರಮವನ್ನು ಇಷ್ಟಪಟ್ಟಿದ್ದಾರೆ. ಬೌಂಡರಿ ಬಳಿಯಲ್ಲಿ ಫೀಲ್ಡಿಂಗಿಗೆ ನಿಂತಿದ್ದಾಗ ಜನರು ನನ್ನನ್ನು ನೋಡಿ ಕಬಡ್ಡಿ ಶೈಲಿಯಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಾರೆ’ ಎಂದಿದ್ದಾರೆ.

ಗಬ್ಬರ್‌ ಹೆಸರಿಗೆ ಕಾರಣ…
ಇದೇ ವೇಳೆ ಮಾತನಾಡಿದ ಶಿಖರ್‌ ಧವನ್‌, ತನಗೆ “ಗಬ್ಬರ್‌’ ಎಂದು ಜನ ಏಕೆ ಕರೆಯುತ್ತಾರೆ ಎನ್ನುವುದಕ್ಕೂ ಉತ್ತರಿಸಿದರು. ಗಬ್ಬರ್‌ ಹೆಸರಿಗೆ ಕಾರಣ ಕ್ರಿಕೆಟಿಗ ವಿಜಯ್‌ ದಹಿಯ ಎಂದಿದ್ದಾರೆ. ರಣಜಿ ಕ್ರಿಕೆಟ್‌ ಪಂದ್ಯದ ವೇಳೆಯೇ ವಿಜಯ್‌ ಅವರು ಶಿಖರ್‌ ಧವನ್‌ಗೆ ಗಬ್ಬರ್‌ ಎಂದು ಕರೆಯುತ್ತಿದ್ದರಂತೆ. ಅನಂತರ ಇದು ಹೀಗೆಯೇ ಮುಂದುವರಿದಿದೆ ಎಂದು ಧವನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next