Advertisement

ಚೋಪ್ರಾ ರಚಿಸಿದ ಟೀಮ್‌ ಇಂಡಿಯಾ ತಂಡಕ್ಕೆ ಶಿಖರ್‌ ಧವನ್‌ ನಾಯಕ

11:52 PM May 12, 2021 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾ ಇಂಗ್ಲೆಂಡ್‌ ಪ್ರವಾಸದಲ್ಲಿರುವಾಗಲೇ ಭಾರತದ ಮತ್ತೂಂದು ತಂಡ ಶ್ರೀಲಂಕಾಕ್ಕೆ ತೆರಳಿ ಸೀಮಿತ ಓವರ್‌ಗಳ ಸರಣಿಯನ್ನಾಡುವ ಸುದ್ದಿ ಭಾರೀ ಸಂಚಲನ ಮೂಡಿಸಿದೆ.

Advertisement

ಇದೇ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ 17 ಸದಸ್ಯರ ತಂಡವೊಂದನ್ನು ಶ್ರೀಲಂಕಾ ಪ್ರವಾಸಕ್ಕೆಂದು ರಚಿಸಿದ್ದಾರೆ. ಎಡಗೈ ಆರಂಭಕಾರ ಶಿಖರ್‌ ಧವನ್‌ ಅವರನ್ನು ನಾಯಕನನ್ನಾಗಿ ಆರಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಉಪನಾಯಕರಾಗಿದ್ದಾರೆ.

ಚೋಪ್ರಾ ತಂಡ: ಶಿಖರ್‌ ಧವನ್‌ (ನಾಯಕ), ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ (ಉಪನಾಯಕ), ಕೃಣಾಲ್‌ ಪಾಂಡ್ಯ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌, ಭುವನೇಶ್ವರ್‌ , ನವದೀಪ್‌ ಸೈನಿ, ಟಿ. ನಟರಾಜನ್‌, ರಾಹುಲ್‌ ಚಹರ್‌, ವರುಣ್‌ ಚಕ್ರವರ್ತಿ, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ : ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ : ಅರೋಗ್ಯ ಇಲಾಖೆ

ಲಂಕಾ ಪ್ರವಾಸಕ್ಕೆ ಅಯ್ಯರ್‌ ಇಲ್ಲ?
ಮುಂಬಯಿ: ಜುಲೈಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್‌ ಶ್ರೇಯಸ್‌ ಅಯ್ಯರ್‌ ಕಾಣಿಸಿಕೊಳ್ಳುವುದು ಅನುಮಾನ. ಆಗ ಅವರು ಭುಜದ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಇಲ್ಲದಿರುವುದೇ ಇದಕ್ಕೆ ಕಾರಣ.

Advertisement

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಗೈರಲ್ಲಿ ಶ್ರೇಯಸ್‌ ಅಯ್ಯರ್‌ಗೆ ಭಾರತ ತಂಡದ ನಾಯಕತ್ವ ಒಲಿಯುವ ಸಾಧ್ಯತೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next