Advertisement

Shiggaavi: ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಭೇಟಿ

06:15 PM Sep 21, 2023 | Team Udayavani |

ಶಿಗ್ಗಾವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ಫ್ರಾನ್ಸ್‌ನ ಫ್ರೆಂಚ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸಸ್ಟೇನೇಬಲ್‌ ಡೆವೆಲಪ್‌ಮೆಂಟ್‌ನ ಸಂಶೋಧಕ ಮ್ಯಾಥ್ಯೂ ಸಾಲ್‌ ಪೀಟೇರು ಮತ್ತು ಹರಿಯಾಣ ಸಂಶೋಧಕಿ ವರ್ಷರಾಣಿ ಹಾಗೂ ಹೈದರಾಬಾದ್‌ ಪ್ಯಾಬ್‌ ಇಂಡಿಯಾದ ಗೋಪಿಕೃಷ್ಣ ಅವರು ಭೇಟಿ ನೀಡಿ ವಿವಿಯ ಜಾನಪದ ವಸ್ತು ಸಂಗ್ರಹಾಲಯ ವೀಕ್ಷಿಸಿದರು.

Advertisement

ಅಲ್ಲದೇ, ಅನೇಕ ಶೈಕ್ಷಣಿಕ ವಿಷಯಗಳ ಕುರಿತು ಕುಲಪತಿ ಪ್ರೊ| ಟಿ.ಎಂ. ಭಾಸ್ಕರ್‌ ಅವರೊಂದಿಗೆ ಚರ್ಚೆ ನಡೆಸಿದರು. ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದ ಅವರು, ತಗರ ಜೋಗಿಗಳು ಮತ್ತು ಸುಡುಗಾಡು ಸಿದ್ಧರ ಪಾರಂಪರಿಕ
ಕೌಶಲ್ಯಗಳು ಹಾಗೂ ವಸ್ತು ಸಂಗ್ರಹಾಲಯ ಕುರಿತು ಸುದೀರ್ಘ‌ವಾಗಿ ಮಾತುಕತೆ ನಡೆಸಿದರು. ವಸ್ತು ಸಂಗ್ರಹಾಲಯದಲ್ಲಿರುವ ಲೋಹ ಹಾಗೂ ಮತ್ತಿತರ ಪರಿಕರಗಳನ್ನು ನೋಡಿ ಆಶ್ಚರ್ಯಚಕಿತರಾದರು.

ವಿಶ್ವವಿದ್ಯಾಲಯದ ಈ ವಸ್ತು ಸಂಗ್ರಹಾಲಯವನ್ನು ಜಾನಪದ ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವ
ಕುಲಪತಿಗಳ ಕನಸನ್ನು ಮೆಚ್ಚಿಕೊಂಡರು. ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಜ್ಞಾನ ಭಂಡಾರ ಜಗತ್ತಿನಾದ್ಯಂತ ಪಸರಿಸುವಂತೆ ಮಾಡಲು ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಚರ್ಚಿಸಿದರು. ಈ ಒಡಂಬಡಿಕೆ ಅನ್ವಯ ವಿವಿಯ ವಿದ್ಯಾರ್ಥಿಗಳು ತಮ್ಮ ಜಾನಪದ ಜ್ಞಾನವನ್ನು ಪ್ಯಾರಿಸ್‌ನಲ್ಲಿ ಪ್ರಸ್ತುತ ಪಡಿಸಲು ಅವಕಾಶ ಗಳನ್ನು ನೀಡುವುದು ಹಾಗೂ ಪ್ಯಾರಿಸ್‌ನ ವಿದ್ಯಾರ್ಥಿ ಗಳು ಅದೇ ಅಧ್ಯಯನಕ್ಕಾಗಿ ಕರ್ನಾಟಕದ ಈ ಜಾನಪದ ವಿವಿಗೆ ಬರಲು ಅನುವು ಮಾಡಿಕೊಡಲಾಗುವುದು.

ಈ ನಿಟ್ಟಿನಲ್ಲಿ ಕುಲಪತಿಗಳ ಈ ಒಡಂಬಡಿಕೆಯ ಚರ್ಚೆ ಭವಿಷ್ಯದ ದಿನಗಳಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು. ಈ ಒಡಂಬಡಿಕೆ 2023-24ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಯಾಗುವಂತೆ ಕಾರ್ಯಪ್ರವೃತ್ತರಾಗುತ್ತೇವೆ ಎಂದು ವಿವಿಯ ಕುಲಪತಿ ಪ್ರೊ|ಟಿ.ಎಂ.ಭಾಸ್ಕರ್‌ ಅವರು ಅತಿಥಿಗಳಿಗೆ ಭರವಸೆ ನೀಡಿದರು.

ಕುಲಪತಿಗಳೊಂದಿಗೆ ಮಾತನಾಡಿದ ಮ್ಯಾಥ್ಯೂ ಅವರು, ಈ ವಿಶ್ವವಿದ್ಯಾಲಯ ಜಾನಪದ ಪರಂಪರೆಯ ಹೊಸ ಲೋಕವನ್ನೇ ಸೃಷ್ಟಿಸಿರುವ ಜಗತ್ತಿನ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಪ್ರಶಂಸನೀಯ. ಜಾಗತಿಕ ಮಟ್ಟದಲ್ಲಿ ಜನಪದ ಕಲೆ ಮತ್ತು ಸಾಹಿತ್ಯ ಅನಾವರಣಗೊಳ್ಳುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದೊಂದಿಗೆ ನಾವು ಸದಾ ಜೊತೆಗಿರುತ್ತೇವೆ ಎಂದು ಭರವಸೆ ನೀಡಿದರು. ಹರಿಯಾಣದ ಸಂಶೋಧಕಿ ವರ್ಷಾರಾಣಿ ಅವರು ಪರಿಸರ ವಿಜ್ಞಾನ ಮತ್ತು ವಾತಾವರಣದ ಕುರಿತ ತಮ್ಮ ಸಂಶೋಧನಾ ಕಾರ್ಯ ನಿಮಿತ್ತ ಈಗಾಗಲೇ ಕರ್ನಾಟಕದಲ್ಲಿ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಕ್ಷೇತ್ರ ಅಧ್ಯಯನ
ಕೈಗೊಂಡಿದ್ದಾರೆ.

Advertisement

ಜಾನಪದ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು, ಕೋರ್ಸ್‌ಗಳು ಮತ್ತು ಪ್ರಾಯೋಗಿಕ ಕಾರ್ಯಗಳ ಕುರಿತು ಚರ್ಚಿಸಿದ ಅವರು, ಈ ನೆಲದ ಜಾನಪದ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತಿರುವ ಈ ವಿಶ್ವವಿದ್ಯಾಲಯವನ್ನು ಪಡೆದ ಕರ್ನಾಟಕದ ಜನತೆ ನಿಜಕ್ಕೂ ಅದೃಷ್ಟವಂತರು ಎಂದು ಹೇಳಿದರು.

ಹೈದರಾಬಾದ್‌ ಪ್ಯಾಬ್‌ ಇಂಡಿಯಾದ ಗೋಪಿಕೃಷ್ಣ ಅವರು ಜಾನಪದ ಲೋಕದ ಕುರಿತು ಕುಲಪತಿಗಳ ಜತೆ ಚರ್ಚಿಸಿದರು. ಮುಂಬರುವ ದಿನಗಳಲ್ಲಿ ಜಗ್ತತಿನ ಏಕೈಕ ಜಾನಪದ ವಿವಿ ನಾಡಿನ ಜಾನಪದ ಪರಂಪರೆಯನ್ನು ವಿಶ್ವದೆಲ್ಲೆಡೆ ಅನಾವರಣಗೊಳಿಸಲಿದೆ ಮತ್ತು ಈ ನಿಟ್ಟಿನಲ್ಲಿ ವಿವಿಯ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ಕಠಿಣ ಪರಿಶ್ರಮವಿದೆ ಎಂದು ಕುಲಪತಿಗಳು ತಿಳಿಸಿದರು. ಈ ವೇಳೆ ವಿವಿಯ ಕುಲಸಚಿವ ಪ್ರೊ| ಸಿ.ಟಿ. ಗುರುಪ್ರಸಾದ, ಸಹಾಯಕ ಪ್ರಾಧ್ಯಾಪಕ ಡಾ|ಚಂದ್ರಪ್ಪ ಸೊಬಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next