Advertisement

ಶಾಲೆ ಪ್ರವಾಸಿ ಮಂದಿರಕ್ಕೆ ಸ್ಥಳಾಂತರ

05:08 PM Sep 15, 2022 | Team Udayavani |

ಚಿಂಚೋಳಿ: ತಾಲೂಕಿನ ಕುಂಚಾವರಂ ಗ್ರಾಮದ ಡಾ|ಬಿ.ಆರ್‌.ಅಂಬೇಡ್ಕರ್‌ ಆಂಗ್ಲ ಮಾಧ್ಯಮ ವಸತಿ ಶಾಲೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರವಾಸಿ ಮಂದಿರಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್‌ ಅಂಜುಮ ತಬಸುಮ ತಿಳಿಸಿದ್ದಾರೆ.

Advertisement

ವಸತಿ ಶಾಲೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ನಡೆದಿರುವುದರಿಂದ ಸೇಡಂ ಸಹಾಯಕ ಆಯುಕ್ತ ಕಾರ್ತಿಕ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ವಸತಿ ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಶೌಚಾಲಯ ಮತ್ತು ಸ್ನಾನಗೃಹ ತಾತ್ಕಾಲಿಕವಾಗಿ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡುವುದು. ಪೊಲೀಸ್‌ ವ್ಯವಸ್ಥೆ, ಮಹಿಳಾ ಪ್ರಾಚಾರ್ಯರು, ಮಹಿಳಾ ವಾರ್ಡನ್‌, ಅಡುಗೆಯವರು, ವಿದ್ಯುತ್‌ ಸಂಪರ್ಕ, ಅಡುಗೆ ಕೋಣೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

ತಾಪಂ ಅಧಿಕಾರಿ ವೈ.ಎಲ್‌ ಹಂಪಣ್ಣ, ಗ್ರೇಡ್‌-2 ತಹಶೀಲ್ದಾರ್‌ ವೆಂಕಟೇಶ ದುಗ್ಗನ, ಎಇಇ ಆನಂದ ಕಟ್ಟಿ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ತಾಲೂಕು ಆರೋಗ್ಯಾಧಿಕಾರಿ ಡಾ|ಮಹಮ್ಮದ ಗಫಾರ, ಪಿಎಸ್‌ಐ ಉದ್ದಂಡಪ್ಪ, ಜೆಇ ರೇವಣಸಿದ್ಧಪ್ಪ ಹದನೂರ, ಪಿಡಿಒ ತುಕ್ಕಪ್ಪ, ಶ್ರೀಪತಿರಾವ್‌ ಇನ್ನಿತರರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿಗೆ ಮನವಿ: ಕುಂಚಾವರಂ ಗ್ರಾಮದ ಡಾ|ಬಿ.ಆರ್‌.ಅಂಬೇಡ್ಕರ್‌ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ನಡೆದಿರುವ ಪ್ರಕರಣದಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಕಾಂಗ್ರೆಸ ಮುಖಂಡ ಸುಭಾಷ ರಾಠೊಡ ಜಿಲ್ಲಾಧಿಕಾರಿ ಯಶವಂತ ಗುರುಕರ್‌ಗೆ ಮನವಿ ಮಾಡಿದರು.

Advertisement

ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚು ಇರುವುದರಿಂದ ಹೊಸ ಕಟ್ಟಡ ಒದಗಿಸಬೇಕು. ಅಲ್ಲಿ ಸ್ನಾನಗೃಹ, ಶೌಚಾಲಯ ಸೌಲಭ್ಯ ಒದಗಿಸಬೇಕು ಎಂದು ಕೋರಿದರು. ಮುಖಂಡರಾದ ಶರಣು ಮೋತಕಪಳ್ಳಿ,ಬಸವರಾಜ ಮಲಿ, ನರಸಿಂಹಲು ಕುಂಬಾರ, ಚಿರಂಜೀವಿ, ಜನಾರ್ಧನ, ಸೀನು, ಗೋಪಾಲ ಜಾಧವ, ಶಂಕರ ಜಾಧವ, ವೆಂಕಟೆರೆಡ್ಡಿ ಕಸ್ತೂರಿ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next