Advertisement

ಕೃಷಿಯಲ್ಲಿ ಖುಷಿ ಕಾಣುವ ಮುಂಬಾರು ದಿನಕರ ಶೆಟ್ಟಿ

10:00 AM Jan 03, 2020 | mahesh |

ಹೆಸರು: ಮುಂಬಾರು ದಿನಕರ ಶೆಟ್ಟಿ
ಏನೇನು ಕೃಷಿ: ಭತ್ತ, ಅಡಿಕೆ, ಕಬ್ಬು, ಬಾಳೆ, ಕಾಳುಮೆಣಸು, ತೆಂಗು
ಎಷ್ಟು ವರ್ಷ: 22
ಕೃಷಿ ಪ್ರದೇಶ: 1.9 ಎಕರೆ
ಸಂಪರ್ಕ: 9449944344

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕುಂದಾಪುರ: ಕೃಷಿಯಲ್ಲಿ ಖುಷಿ ಕಂಡು ಇನ್ನಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸಿದವರು ಇವರು. ಇರುವುದು ಸಣ್ಣದಾದ, 1.9 ಎಕರೆ ಗುಡ್ಡವನ್ನೂ ಒಳಗೊಂಡ ಜಾಗ. ಅದರಲ್ಲೇ ಥರಾವರಿ ಕೃಷಿ ಮಾಡಿ ಈಗ ಸಾಧಕರಾಗಿದ್ದಾರೆ. ಕಾವ್ರಾಡಿ ಗ್ರಾಮದ ಮುಂಬಾರು ದಿನಕರ ಶೆಟ್ಟರು ಸ್ಥಳೀಯವಾಗಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅವರ ಕೈಹಿಡಿದದ್ದು ಕೃಷಿ, ಅವರ ಆಸಕ್ತಿ ಕೃಷಿ. 50 ಸೆಂಟ್ಸ್‌ ಸ್ಥಳದಲ್ಲಿ 200 ಅಡಿಕೆ ಗಿಡಗಳನ್ನು ಬೆಳೆಸಿದ್ದು, ನೆಟ್ಟು ಮೂರೇ ವರ್ಷಗಳಲ್ಲಿ ಫ‌ಲ ತೆಗೆದಿದ್ದಾರೆ. ವ್ಯವಸ್ಥಿತ ಹಾಗೂ ಕ್ರಮಬದ್ಧವಾಗಿ ತೋಟ ನಿರ್ವಹಣೆ ಮಾಡಿದರೆ, ಸಂಪೂರ್ಣ ಸಾವಯವ ವಿಧಾನ ಅನುಸರಿಸಿದರೂ ಫ‌ಸಲಿಗೆ ಮೋಸ ಇಲ್ಲ ಎನ್ನುತ್ತಾರೆ ಅವರು. ಶೇ. 80 ಇಳುವರಿ ಬರೇ ಮೂರು ಮೂರೂವರೆ ವರ್ಷಗಳ‌ಲ್ಲಿ ಲಭಿಸಿದೆ.

ಅಡಿಕೆ
1.4 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ತೆಗೆಯುವ ದಿನಕರ ಶೆಟ್ಟರು ಅವರ ಹಿರಿಯರ ಕಾಲದಿಂದಲೇ ಕೃಷಿ ಕುಟುಂಬ ದವರು. ಆದರೆ ಉದ್ಯೋಗ ನಿಮಿತ್ತ ಬೇರೆಡೆ ಇದ್ದವರು. ಅನಂತರ ಊರಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡರು. ಕೇವಲ ಭತ್ತದ ಕೃಷಿ ಸಾಲದು ಎಂದು ಅರ್ಧ ಎಕರೆ ಗುಡ್ಡ ಪ್ರದೇಶದಲ್ಲಿ ಗುಡ್ಡಭೂಮಿಯನ್ನು ಹಸನುಗೊಳಿಸಿ ನಾಲ್ಕು ಅಡಿ ಆಳದ ನೇರ ಕಂದ‌ಕಗಳನ್ನು ತೋಡಿ, 10 ಅಡಿಗೊಂದರಂತೆ ಶ್ರೀಮಂಗಳ, ಇಂಟರ್‌ ಸಿ ಮಂಗಳ ಅಡಿಕೆ, ಸುತ್ತ ಹೈಬ್ರಿàಡ್‌ ತೆಂಗಿನ ಗಿಡ, ಅಡಿಕೆ ಸಾಲಿನಲ್ಲಿ ಕಬ್ಬು, ಬಾಳೆ ಬೆಳೆಸಿದರು.

ಕೃಷಿಯಲ್ಲೂ ಸ್ವಚ್ಛತೆ
ಕ್ರಮಬದ್ಧ ಹಾಗೂ ಸುಸ್ಥಿರ ಕೃಷಿ ಜತೆಗೆ ಸ್ವತ್ಛತೆಗೂ ಮಹತ್ವವನ್ನು ನೀಡುವುದು ರೈತಾಪಿ ವರ್ಗದ ಕರ್ತವ್ಯ ಎನ್ನುವ ಅವರು, ಅವರ ಯೋಚನೆಯನ್ನು ಯೋಜನೆಯಾಗಿ ತಮ್ಮ ಪುಟ್ಟ ತೋಟದಲ್ಲಿ ತೋರಿಸಿದ್ದಾರೆ. ಯಾವುದೇ ತೋಟವಿರಲಿ ಅಲ್ಲಿ ಸ್ವತ್ಛತೆ ಹಾಗೂ ಕೃಷಿಕರ ಶಿಸ್ತು ಕಾಣಬೇಕು. ಆಗ ಕೃಷಿಕನ ಬೆವರ ಹನಿ ಫ‌ಲವಾಗಿ ಮೊಳೆಯುತ್ತದೆ. ತೋಟ ಸ್ವತ್ಛವಾಗಿದ್ದರೆ ಕೊಳೆಯಂತಹ ಬ್ಯಾಕ್ಟೀರಿಯಾ ಬಾಧೆ ಕಡಿಮೆ ಎನ್ನುವುದು ದಿನಕರ ಶೆಟ್ಟರು ಕಂಡುಕೊಂಡ ಸತ್ಯ. ತೋಟದಲ್ಲಿ ಸ್ವತ್ಛತೆಯ ಪರಿಣಾಮ ಗಿಡಗಳಲ್ಲಿ ಕಾಣಬಹುದು ಎನ್ನುವುದಕ್ಕೆ ಅಲ್ಲಿನ ಅಡಿಕೆ ಗಿಡಗಳೇ ಸಾಕ್ಷಿ.
ಮಣ್ಣು

Advertisement

ಗಿಡಗಳನ್ನು ನೆಡಲು ಕಂದ‌ಕ ನಿರ್ಮಾಣ ಮಾಡಿದ್ದರಿಂದ ಸುಮಾರು 10 ವರ್ಷಗಳ ತನಕ ಹೊಸ ಮಣ್ಣನ್ನು ದೂರದಿಂದ ಹೊತ್ತು ತರುವ ಅಗತ್ಯವಿಲ್ಲ. ಗುಡ್ಡ ಪ್ರದೇಶವಾದ್ದರಿಂದ ನೀರನ್ನು ಹಿಡಿದಿಟ್ಟುಕೊಳ್ಳಲು, ಸಾಂದ್ರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ತುಂತುರು ನೀರಾವರಿ ವಿಧಾನ ಬಳಕೆ ಮಾಡಿರುವುದರಿಂದ ನೀರಿನ ಮಿತವ್ಯಯದ ಜತೆಗೆ ಮಿಶ್ರ ಬೇಸಾಯವೂ ಸಾಧ್ಯವಾಗುತ್ತದೆ.

ಕೃಷಿಕರಿಗಾಗಿ ನರ್ಸರಿ
ಸಣ್ಣ ಭೂಮಿಯಲ್ಲಿ ಬೆಳೆದ ಕೃಷಿ ನೋಡಲು ಅನೇಕರು ಆಗಮಿಸುತ್ತಾರೆ. ಅಂತಹ ಆಸಕ್ತರಿಗಾಗಿ ಸಣ್ಣ ನರ್ಸರಿಯನ್ನೇ ಪ್ರಾರಂಭಿಸಿದ್ದು ಲಾಭದ ಆಶಯವಿಲ್ಲದೇ ಆಸಕ್ತರಿಗೆ ವೆಚ್ಚದ ದರದಲ್ಲೆ ನೀಡುತ್ತಿದ್ದಾರೆ. ಗುಣಮಟ್ಟದ ಸುಧಾರಿತ ತಳಿಯ ಅಡಿಕೆ ಗಿಡಗಳನ್ನು ರೈತರಿಗೆ ನೀಡುವುದು ಇವರ ಉದ್ದೇಶ. ಅನೇಕ ಹೊಸದಾಗಿ ಕೃಷಿ ಮಾಡುವ ಆಸಕ್ತರು ಗಿಡ ಪಡೆಯುವಾಗ ಮೋಸ ಹೋದ ಘಟನೆಗಳೇ ಇಂತಹ ಸಾಹಸಕ್ಕೆ ಪ್ರೇರಣೆ. ಮಂಗಳ, ಶ್ರೀಮಂಗಳ, ಇಂಟರ್‌ ಸಿ ಮಂಗಳ, ಮೋಹಿತ್‌ ನಗರ, ಹೈಬ್ರಿàಡ್‌ ಮೋಹಿತ್‌ ನಗರ, ಕುಣಿಮಂಗಳ ಗಿಡಗಳು ಇವರಲ್ಲಿ ಲಭ್ಯವಿವೆ. ಈಗಾಗಲೇ ಸಾವಿರಾರು ಅಡಿಕೆ ಗಿಡಗಳನ್ನು ಮಾರಾಟ ಮಾಡಲಾಗಿದೆ. ಕಬ್ಬು, ಕಾಳುಮೆಣಸು, ತೆಂಗು, ಸೇಲಂ ಬಾಳೆ, ಪುಟ್ಟಬಾಳೆ, ಕರ್‌ ಬಾಳೆ, ಕ್ಯಾವೆಂಡಿಶ್‌ ಮೊದಲಾದ ಬಾಳೆ ಬೆಳೆಸಿದ್ದಾರೆ. ಭತ್ತದ ಅನಂತರ ತರಕಾರಿ ಬೆಳೆಯುತ್ತಾರೆ. ಕೃಷಿ ಭೂಮಿ ಖಾಲಿ ಇರಲು ಬಿಡದೆ ಬೆಳೆಯುತ್ತಲೇ ಇರುವುದು.

ಮಾಹಿತಿ ನೀಡುತ್ತೇನೆ
ವ್ಯವಹಾರದ ದೃಷ್ಟಿಯಲ್ಲಿ ನಾನು ನರ್ಸರಿ ನಡೆಸುತ್ತಿಲ್ಲ. ಉತ್ತಮ ಗುಣಮಟ್ಟದ ಗಿಡಗಳು ರೈತರಿಗೆ ಸಿಗಬೇಕು ಎನ್ನುವುದಷ್ಟೇ ಆಶಯ. ಎಲ್ಲೆಲ್ಲಿಂದಲೋ ಗಿಡ ಪಡೆದು ಮೋಸ ಹೋಗಬಾರದು. ಆದ್ದರಿಂದ ನಾನು ನನ್ನಲ್ಲಿಗೆ ಬರುವವರಿಗೆ ಕೃಷಿ ಮಾಹಿತಿ ನೀಡುತ್ತೇನೆ. ಯಾವ ಮಣ್ಣಿಗೆ ಯಾವ ತಳಿಯ ಗಿಡ ಸೂಕ್ತ, ಮಳೆ ಎಷ್ಟಿದ್ದಾಗ ಗಿಡ ನೆಡಬೇಕು, ಇಳಿಜಾರಿನ ಕೃಷಿಗೆ ಯಾವುದು ಸೂಕ್ತ, ಹೇಗೆ ಸಿದ್ಧತೆ ಮಾಡಬೇಕು, ಗುಡ್ಡಗಾಡಿನ ಕೃಷಿಗೆ ಯಾವ ತಳಿ ಸೂಕ್ತ ಇತ್ಯಾದಿ ಎಲ್ಲ ಮಾಹಿತಿ ನೀಡುತ್ತೇನೆ.
ಈ ಜಾತಿ ಗಿಡಕ್ಕೆ ಈ ಜಾತಿ ಮಣ್ಣಾದರೆ ಉತ್ತಮ ಎಂದಿರುತ್ತದೆ. ಹೊಸ ತೋಟವಾದರೆ ಹತ್ತಿರ ಯಾವುದೇ ತೋಟ ಇಲ್ಲದಿದ್ದರೆ ಯಾವುದೇ ಹೊಸ ತಳಿ ನೆಡಬಹುದು. ಸನಿಹದಲ್ಲಿ ಬೇರೆ ತೋಟ ಇದ್ದರೆ ಅಲ್ಲಿನ ರೋಗಗಳ ಕುರಿತೂ ಎಚ್ಚರ ವಹಿಸಬೇಕು.
-ಮುಂಬಾರು ದಿನಕರ ಶೆಟ್ಟಿ, ಕೃಷಿಕರು

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next