Advertisement

ನವಲೂರು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಶೆಟ್ಟರ ಸೂಚನೆ

10:08 AM Jun 26, 2020 | mahesh |

ಧಾರವಾಡ: ಕಳೆದ ಒಂದೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನವಲೂರು ಬಿಆರ್‌ಟಿಎಸ್‌ ರೋಡ್‌ ಓವರ್‌ ಬ್ರಿಡ್ಜ್ ಕಾಮಗಾರಿಯನ್ನು ಗ್ರಾಮಸ್ಥರಿಗೆ ಅನುಕೂಲ ಹಾಗೂ ತಾಂತ್ರಿಕವಾಗಿ ಕಾರ್ಯಗತವಾಗಬಹುದಾದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಹೊಸ ಸಂಸ್ಥೆಯ ಸಮಾಲೋಚಕರನ್ನು ಬಳಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಬೆಂಗಳೂರು ನಗರದ ಖನಿಜ ಭವನದ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕೆಆರ್‌ಡಿಎಸಿಎಲ್‌, ಹೆಚ್‌ಡಿಬಿಆರ್‌ಟಿಎಸ್‌ ಹಾಗೂ ನವಲೂರಿನ ಗ್ರಾಮಸ್ಥರೊಂದಿಗೆ ಸಭೆ ಕೈಗೊಂಡು ಅವರು ಮಾತನಾಡಿದರು. ನವಲೂರಿನ ಬಳಿ ರೋಡ್‌ ಓವರ್‌ ಬ್ರಿಡ್ಜ್ ಕಾಮಗಾರಿಯನ್ನು ಅಲ್ಲಿನ ಜನರಿಗೆ ಅನುಕೂಲವಾಗುವ  ರೀತಿಯಲ್ಲಿ ಪೂರ್ಣಗೊಳಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಾಂತ್ರಿಕ ಸಮಿತಿ ಸಲಹೆ ಜತೆಯಲ್ಲೇ ಮೂರನೇ ಸಂಸ್ಥೆಯ ಸಹಾಯವನ್ನು ಪಡೆಯುವಂತೆ ಸೂಚನೆ ನೀಡಿದರು.

ಇದೇ ವೇಳೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಹಿರಿಯ ಅಧಿಕಾರಿಯಾದ ಮಂಜುಳಾ ಅವರು ನೀಡಿದ ನಾಲ್ಕು ಆಯ್ಕೆಗಳನ್ನು ಪರಾಮರ್ಶಿಸಿದರು. ಅಲ್ಲದೆ, ಈ ಆಯ್ಕೆಗಳಿಗೆ ಗ್ರಾಮಸ್ಥರು ಮುಂದಿಟ್ಟ ಸಮಸ್ಯೆಗಳನ್ನು ಆಲಿಸಿದರು. ಶಾಸಕ ಅರವಿಂದ ಬೆಲ್ಲದ, ಕೆಆರ್‌ ಡಿಸಿಎಲ್‌ ಎಂಡಿ ಪ್ರಕಾಶ್‌ ಕುಮಾರ್‌, ತಾಂತ್ರಿಕ ನಿರ್ದೇಶಕ ಜಯಪ್ರಕಾಶ್‌ ಸೇರಿದಂತೆ ನವಲೂರಿನ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next