Advertisement

Russia ಆಕ್ರಮಿತ ಉಕ್ರೇನ್‌ನಲ್ಲಿ ಶೆಲ್‌ ದಾಳಿ: 25 ಸಾವು

10:01 PM Jan 21, 2024 | Team Udayavani |

ಕೀವ್‌: ರಷ್ಯಾ ಆಕ್ರಮಿತ ಉಕ್ರೇನ್‌ನ ದೊನೆಕ್ಸ್‌ ನಗರದ ಉಪನಗರವಾದ ಟೆಕ್ಸಿಲ್ಶಿಕ್‌ನ ಮಾರುಕಟ್ಟೆಯ ಮೇಲೆ ರವಿವಾರ ಶೆಲ್‌ ದಾಳಿ ನಡೆಸಲಾಗಿದ್ದು, ಕನಿಷ್ಠ 25 ಮಂದಿ ಸಾವಿಗೀಡಾಗಿದ್ದರೆ, 2 ಮಕ್ಕಳ ಸಹಿತ 20 ಮಂದಿ ಗಾಯಗೊಂಡಿದ್ದಾರೆ.

Advertisement

ಉಕ್ರೇನ್‌ ಸೇನೆ ಈ ದಾಳಿ ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿರುವರಾದರೂ ಉಕ್ರೇನ್‌ನ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ, ಭಾನುವಾರದ ರಷ್ಯಾದ ಉಸ್ಟ್‌ ಲುಗಾ ಬಂದರಿನಲ್ಲಿ ಎರಡು ಕಡೆ ಅಗ್ನಿ ಅನಾಹುತ ಸಂಭವಿಸಿದ್ದು, ಉಕ್ರೇನ್‌ ನಡೆಸಿದ ಡ್ರೋನ್‌ ದಾಳಿಯ ವೇಳೆ ಗ್ಯಾಸ್‌ ಟ್ಯಾಂಕ್‌ಗೆ ಹಾನಿ ಸಂಭವಿಸಿದ ಪರಿಣಾಮ ಈ ಬೆಂಕಿ ಆಕಸ್ಮಿಕಗಳು ಸಂಭವಿಸಿವೆ. ರಷ್ಯಾದ ಎರಡನೇ ಅತೀದೊಡ್ಡ ನೈಸರ್ಗಿಕ ಉತ್ಪಾದಕ ಕಂಪೆನಿಯಾದ ನೊವಾಟೆಕ್‌ನ ಘಟಕದಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next