Advertisement

Russia; ಮಾಸ್ಕೋ ದಾಳಿಯ ಬಗ್ಗೆ ತಿಂಗಳ ಮೊದಲೇ ಅಮೆರಿಕ ಎಚ್ಚರಿಕೆ ನೀಡಿತ್ತು

09:21 AM Mar 23, 2024 | Team Udayavani |

ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಹೊರವಲಯದಲ್ಲಿರುವ ಕಾನ್ಸರ್ಟ್ ಹಾಲ್‌ನಲ್ಲಿ ಶುಕ್ರವಾರ ಬಂದೂಕುಧಾರಿಗಳು ಗುಂಡು ಹಾರಿಸಿ ಸ್ಫೋಟಕಗಳನ್ನು ಸ್ಫೋಟಿಸಿದ ಕಾರಣ ಕನಿಷ್ಠ 60 ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಮಾಸ್ಕೋದಲ್ಲಿ ದೊಡ್ಡ ಉಗ್ರ ದಾಳಿ ನಡೆಯಬಹುದಾದ ಮುನ್ಸೂಚನೆಯನ್ನು ಅಮೆರಿಕಾ ಈ ತಿಂಗಳ ಆರಂಭದಲ್ಲಿಯೇ ರಷ್ಯಾಗೆ ನೀಡಿತ್ತು ಎಂದು ಶ್ವೇತಭವನ ತಿಳಿಸಿದೆ.

“ಈ ತಿಂಗಳ ಆರಂಭದಲ್ಲಿ ಮಾಸ್ಕೋದಲ್ಲಿ ದೊಡ್ಡ ಉಗ್ರ ದಾಳಿ ನಡೆಯಬಹುದಾದ ಬಗ್ಗೆ ಯುಎಸ್ ಗೆ ಮಾಹಿತಿಯಿತ್ತು. ಜನ ಸಮೂಹದ ನಡುವೆ ಅದರಲ್ಲೂ ಕಾನ್ಸರ್ಟ್ ಗಳನ್ನು ಗುರಿಯಾಗಿಸಬಹುದು” ಎಂದು ಶ್ವೇತಭವನ ಹೇಳಿದೆ. ಈ ಮಾಹಿತಿಯನ್ನು ಮಾಸ್ಕೋಗೆ ನೀಡಲಾಗಿತ್ತು ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತವು ಎಚ್ಚರಿಸುವ ಕರ್ತವ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ವ್ಯಾಟ್ಸನ್ ಹೇಳಿದರು. ಇದರಲ್ಲಿ ಯುನೈಟೆಡ್ ಸ್ಟೇಟ್ಸ್ ಅಪಹರಿಸುವ ಅಥವಾ ಕೊಲ್ಲುವ ನಿರ್ದಿಷ್ಟ ಬೆದರಿಕೆಗಳ ಗುಪ್ತಚರ ಮಾಹಿತಿಯನ್ನು ಪಡೆದಾಗ ರಾಷ್ಟ್ರಗಳು ಅಥವಾ ಗುಂಪುಗಳನ್ನು ಎಚ್ಚರಿಸುತ್ತದೆ.

ಮುಂಜಾನೆ ಮಾಸ್ಕೋದ ಕಾನ್ಸರ್ಟ್ ಹಾಲ್‌ನಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿ 60 ಕ್ಕೂ ಹೆಚ್ಚು ಜನರನ್ನು ಕೊಂದರು, 100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಇಸ್ಲಾಮಿಕ್ ಸ್ಟೇಟ್ ಗುಂಪು ಇದರ ಹೊಣೆ ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next