Advertisement

Moscow: ಒಂದೇ ಟಾಯ್ಲೆಟ್‌ನಲ್ಲಿ 28 ಮೃತದೇಹ ಪತ್ತೆ!

01:05 AM Mar 25, 2024 | Team Udayavani |

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದ ಕ್ರಾಕಸ್‌ ಸಿಟಿ ಹಾಲ್‌ನ ಸಂಗೀತ ಕಾರ್ಯಕ್ರಮಕ್ಕೆ ಶುಕ್ರವಾರ ನುಗ್ಗಿದ ಐಸಿಸ್‌ ಉಗ್ರರು 150 ಜನರನ್ನು ಹತ್ಯೆಗೈದ ಬೆನ್ನಲ್ಲೇ, ಘಟನೆಯ ಭೀಕರತೆಯು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

Advertisement

ಘಟನ ಸ್ಥಳದಲ್ಲಿ ಇನ್ನೂ ಶೋಧ ಕಾರ್ಯ ಮುಂದುವರಿದಿದ್ದು, ಅವಶೇಷಗಳಡಿಯಿಂದ ಮೃತದೇಹಗಳ ಹೊರತೆಗೆಯುವ ಪ್ರಕ್ರಿಯೆ ಶನಿವಾರವೂ ನಡೆದಿದೆ. ಶೋಚನೀಯ ಎಂಬಂತೆ, 28 ಮೃತದೇಹಗಳು ಒಂದೇ ಶೌಚಾಲಯ ದಲ್ಲಿ ಸಿಕ್ಕಿದೆ. ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳಲು 28 ಮಂದಿ ಒಂದೇ ಟಾಯ್ಲೆಟ್‌ನಲ್ಲಿ ಆಶ್ರಯ ಪಡೆದಿದ್ದರು. ಆದರೆ ಅಲ್ಲೂ ಬಿಡದ ಉಗ್ರರು, ಅಲ್ಲಿದ್ದ ಎಲ್ಲರನ್ನೂ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ ಕ್ರಾಕಸ್‌ ಸಿಟಿ ಹಾಲ್‌ನ ಮೆಟ್ಟಿಲುಗಳ ಮೇಲೆ 14 ಮೃತದೇಹಗಳು ಪತ್ತೆಯಾಗಿರುವುದಾಗಿ ರಷ್ಯಾ ಮಾಧ್ಯಮ ಗಳು ವರದಿ ಮಾಡಿವೆ.

26/11ರ ಮುಂಬಯಿ ದಾಳಿ ಮಾದರಿಯಲ್ಲಿ ಮಾಸ್ಕೋದಲ್ಲಿ ನಡೆದ ಈ ಭೀಕರ ದಾಳಿಯ ಹೊಣೆಯನ್ನು ಐಸಿಸ್‌ ಉಗ್ರ ಸಂಘಟನೆ ಹೊತ್ತುಕೊಂ ಡಿದೆ. ರಷ್ಯಾ ಪೊಲೀಸರು ಇದುವರೆಗೂ ನಾಲ್ವರು ಉಗ್ರರು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಿದ್ದಾರೆ.

ಉಗ್ರರ ಫೋಟೋ, ವೀಡಿಯೋ ಬಿಡುಗಡೆಗೊಳಿಸಿದ ಐಸಿಸ್‌
ಮಾಸ್ಕೋದಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರ ಫೋಟೋ ಹಾಗೂ ವೀಡಿಯೋಗಳನ್ನು ಐಸಿಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಸಾಲ್ಟ್ ರೈಫ‌ಲ್‌ಗಳನ್ನು ಹಿಡಿದು ಒಳನುಗ್ಗುವ ನಾಲ್ವರು ಬಂದೂಕುಧಾರಿಗಳು ಅಲ್ಲಿದ್ದವರ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯಗಳು ವೀಡಿಯೋದಲ್ಲಿವೆ. “ಇಸ್ಲಾಂ ವಿರುದ್ಧ ಹೋರಾಟ ನಡೆಸುತ್ತಿರುವ ರಾಷ್ಟ್ರಗಳು ಮತ್ತು ಐಸಿಸ್‌ ನಡುವಿನ ಕದನವು ತೀವ್ರವಾ ಗುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ’ ಎಂದು ಐಸಿಸ್‌ ಹೇಳಿದೆ.

ಉಕ್ರೇನ್‌ ಮೇಲೆ ಕ್ಷಿಪಣಿಗಳ ಮಳೆ
ಮಾಸ್ಕೋ ದಾಳಿ ಬೆನ್ನಲ್ಲೇ ಉಕ್ರೇನ್‌ ಮೇಲೆ ರಷ್ಯಾ ವೈಮಾನಿಕ ದಾಳಿಯ ನ್ನು ತೀವ್ರಗೊಳಿಸಿದೆ. ರಾಜಧಾನಿ ಕೀವ್‌ ಅನ್ನು ಗುರಿಯಾಗಿಸಿಕೊಂಡು ರವಿವಾರ ಕ್ಷಿಪಣಿಗಳ ಮಳೆಯನ್ನೇ ಸುರಿಸಲಾಗಿದೆ. ಈ ಪೈಕಿ 1 ಕ್ಷಿಪಣಿ ಪೋಲೆಂಡ್‌ ವಾಯುಪ್ರದೇಶಕ್ಕೂ ಪ್ರವೇಶಿಸಿದೆ ಎಂದು ಪೋಲೆಂಡ್‌ ಅಧಿಕಾರಿಗಳು ಹೇಳಿದ್ದಾರೆ. ಸಾವು- ನೋವಿನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಮಾಸ್ಕೋ ದಾಳಿ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ಶನಿವಾರವಷ್ಟೇ ರಷ್ಯಾ ಆರೋಪಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next