Advertisement
ಮಾಜಿ ಪ್ರಧಾನಿ ಹೇಳಿಕೆಗಳು ಭಾರತ ಮತ್ತು ಬಾಂಗ್ಲಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ಸುಧಾರಿಸಲು ಅಡ್ಡಿ ಎಂದು ಸರಕಾರದ ಸಲಹೆಗಾರ ಮೊಹಮ್ಮದ್ ತೌಹೀದ್ ಹುಸೇನ್ ಹೇಳಿದ್ದಾರೆ. ತಮ್ಮ ಪುತ್ರ ಸಜೀಬ್ ವಾಜೆದ್ ಟ್ವೀಟ್ ಮೂಲಕ ದೇಶದಲ್ಲಿನ ಹಿಂಸಾಕೃತ್ಯಗಳು ಖಂಡನೀಯ ಎಂದು ಟೀಕಿಸಿದ್ದು ಸರಕಾರದ ಗಮನಕ್ಕೆ ಬಂದಿದೆ ಎಂದಿದ್ದಾರೆ. ಜತೆಗೆ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾಕರ ಮೇಲೆ ದಾಳಿಗಳು ನಡೆದ ಬಗ್ಗೆ ಅತಿರಂಜಿತ ವರದಿಗಳು ಪ್ರಕಟವಾಗುತ್ತಿವೆ. ಅದು ಸರಿಯಲ್ಲ ಎಂದೂ ಹುಸೇನ್ ಆಕ್ಷೇಪಿಸಿದ್ದಾರೆ.
ಬಾಂಗ್ಲಾದೇಶ ಸ್ಥಾಪಕರಾದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಪುಣ್ಯ ಸ್ಮರಣಾರ್ಥವಾಗಿ ನೀಡಲಾಗುತ್ತಿದ್ದ ಆ.15ರಂದು ನೀಡಲಾಗುತ್ತಿದ್ದ ಸಾರ್ವಜನಿಕ ರಜೆಯನ್ನು ಬಾಂಗ್ಲಾ ದೇಶದ ಮಧ್ಯಾಂತರ ಸರಕಾರ ರದ್ದುಗೊಳಿಸಿದೆ. ಹೊಸ ಸರಕಾರದ ಸಲಹಾ ಸಮಿತಿ ಈ ಬಗ್ಗೆ ಸಮರ್ಥನೆ ನೀಡಿ, ರಾಜಕೀಯ ಪಕ್ಷಗಳ ಜತೆಗೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈ ಗೊಳ್ಳಲಾಗಿದೆ ಎಂದಿದೆ.