Advertisement

Sheikh Hasina ವಾಪಸ್‌ ಕರೆಸಿ ಶೀಘ್ರ ವಿಚಾರಣೆ: ಬಾಂಗ್ಲಾ

12:52 AM Sep 10, 2024 | Team Udayavani |

ಢಾಕಾ: ಭಾರತದಲ್ಲಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾರನ್ನು ವಾಪಸ್‌ ಬಾಂಗ್ಲಾದೇಶಕ್ಕೆ ಕರೆ ತಂದು, ಇತ್ತೀಚಿನ ಗಲಭೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಪ್ರಕ್ರಿಯೆಗಳನ್ನು ಶೀಘ್ರವೇ ಆರಂಭಿಸಲಾ ಗುವುದು ಎಂದು ಮಧ್ಯಾಂತರ ಸರಕಾರದ ನೂತನ ಮುಖ್ಯ ಪ್ರಾಸಿಕ್ಯೂಟರ್‌ ಮೊಹಮ್ಮದ್‌ ತಜುಲ್‌ ಇಸ್ಲಾಮ್‌ ಹೇಳಿದ್ದಾರೆ. ಬಾಂಗ್ಲಾದೇಶವು ಭಾರತದ ಜತೆ ಅಪರಾಧಿಗಳ ಹಸ್ತಾಂತರದ ಒಪ್ಪಂದ ಮಾಡಿ ಕೊಂಡಿದೆ. ಹಾಗಾಗಿ ಒಪ್ಪಂದ ಅನುಸಾರ ಹಸೀನಾ ರನ್ನು ವಾಪಸ್‌ ಕರೆ ತರಲಾಗುವುದು. ಹಸೀನಾ ಮಾತ್ರವಲ್ಲ, ನರಮೇಧದಲ್ಲಿ ಪಾಲ್ಗೊಂಡ ಎಲ್ಲರನ್ನೂ ವಿಚಾರಣೆ ಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next