Advertisement

ಕುರಿಗಳ ಕಳ್ಳತನ : 24 ಗಂಟೆಯಲ್ಲಿ ಕಳ್ಳರ ಬಂಧನ

10:06 PM Jun 12, 2020 | Sriram |

ಕೊಪ್ಪಳ: ತಾಲೂಕಿನ ಚಿಲವಾಡಗಿ ನಿವಾಸಿ ಮಲ್ಲೇಶ ಕಂಬಳಿ ಅವರ 28 ಕುರಿ ಹಾಗೂ 2 ಟಗರು ಸೇರಿ 1,56 ಲಕ್ಷ ರೂ. ಬೆಲೆಬಾಳುವ ಕುರಿಗಳ ಕಳ್ಳತನ ಪ್ರಕರಣವನ್ನು ಕೊಪ್ಪಳ ಪೊಲೀಸರು ಕೇವಲ 24 ಗಂಟೆಯಲ್ಲಿ ಬೇಧಿಸಿ 4 ಜನ ಖದೀಮರನ್ನು ಕುರಿಗಳ ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಮಲ್ಲೇಶ ಕಂಬಳಿ ಅವರು ದೇವಲಾಪೂರ ಸೀಮಾದಲ್ಲಿ ಜೂ.11 ರಂದು ಜಮೀನಿನಲ್ಲಿ ಕುರಿಗಳನ್ನು ವಿಶ್ರಾಂತಿಗೆ ತಂಗಿದ್ದರು. ಈ ವೇಳೆ ಯಾರೋ ಖದೀಮರು ಕುರಿ ಕಳ್ಳತನ ಮಾಡಿದ್ದಾರೆ. ಇದರಿಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕುರಿ ಕಳ್ಳತನದ ದೂರು ನೀಡಿದ್ದರು. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳಾದ ಸಿಪಿಐ ರವಿ ಉಕ್ಕುಂದ, ಪಿಎಸ್ಐ ಸುರೇಶ ಅವರು ಎಸ್ಪಿ ಜಿ‌ ಸಂಗೀತಾ, ಡಿಎಸ್ಪಿ ವೆಂಕಟಪ್ಪ ನಾಯಕ್ ಮಾರ್ಗದರ್ಶನದಲ್ಲಿ ತಂಡ ರಚಿಸಿ ಖದೀಮರಿಗೆ ಜಾಲ ಬೀಸಿದ್ದರು.

ಜೂ.12 ರಂದು ಕುಕನೂರು ಸಮೀಪದ ವಿನಾಯಕ ಪೆಟ್ರೋಲ್ ಬಂಕ್ ಹತ್ತಿರ ಟಾಟಾ ಎಸ್ ನಲ್ಲಿದ್ದ ಕುರಿಗಳ ಸಮೇತ ಅಣ್ಣಪ್ಪ, ರವಿ, ಕಲ್ಲಪ, ಮನೋಜ ಎನ್ನುವ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 36 ಕುರಿ, 12 ಮೇಕೆ, ಟಾಟಾಎಸ್ ವಾಹನ ಸಮೇತ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣವನ್ನ ಕೇವಲ 24 ಗಂಟೆಯಲ್ಲಿ ಬೇಧಿಸಿದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next