Advertisement

ವಿದುಷಿ ಶೀಲಾಗೆ ನಿರ್ಮಾಣ್‌-ಪುರಂದರ ಸಂಗೀತರತ್ನ ಪ್ರಶಸ್ತಿ

12:35 PM Nov 26, 2017 | Team Udayavani |

ಬೆಂಗಳೂರು: ದಾಸ ಸಾಹಿತ್ಯ ಹಾಗೂ ದಾಸರ ಪದಗಳ ಹಿರಿಮೆ ಖ್ಯಾತಿಗೊಳಿಸುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟಿರುವ ವೀಯೆಲ್ಲೆನ್‌- ನಿರ್ಮಾಣ್‌-ಪುರಂದರ ಪ್ರತಿಷ್ಠಾನದ 2018ರ ಸಂಗೀತರತ್ನ ಪ್ರಶಸ್ತಿಗೆ ಖ್ಯಾತ ವಿದುಷಿ ಎಂ.ಎಸ್‌. ಶೀಲಾ ಅವರು ಭಾಜನರಾಗಿದ್ದಾರೆ.

Advertisement

ಪ್ರತಿಷ್ಠಾನದ ವಿಶ್ವಸ್ಥರನ್ನೊಳಗೊಂಡ ಆಯ್ಕೆ ಸಮಿತಿಯಲ್ಲಿ ಶ್ರೀಯುತರಾದ ವಿದ್ಯಾಭೂಷಣ, ಅರಳು ಮಲ್ಲಿಗೆ ಪಾರ್ಥಸಾರಥಿ, ಮೋಹನ್‌ ಹಾಗೂ ವಿ. ಲಕ್ಷೀನಾರಾಯಣ್‌ ಹಾಗೂ ತಜ್ಞರ ತಂಡ ಸರ್ವಾನುಮತದಿಂದ ವಿದುಷಿ ಎಂ.ಎಸ್‌. ಶೀಲಾ ಅವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲು ತೀರ್ಮಾನಿಸಿರುತ್ತದೆ.

ಪ್ರಶಸ್ತಿ ಫಲಕ, ಸ್ವರ್ಣಹಾರ, ಸ್ವರ್ಣ ಪದಕ, ಅಭಿನಂದನಾ ಪತ್ರ ಹಾಗೂ ಒಂದು ಲಕ್ಷದ ಒಂದು ರೂ. ನಗದು ಒಳಗೊಂಡಿರುತ್ತದೆ. ಜ.21 ರಂದು ಭಾನುವಾರ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ನಡೆಯಲಿದೆ ಎಂದು  ಪ್ರತಿಷ್ಠಾನದ ವ್ಯವಸ್ಥಾಪಕ ವಿಶ್ವಸ್ಥರು ವಿ. ಲಕ್ಷೀನಾರಾಯಣ್‌ ಅವರು ತಿಳಿಸಿದ್ದಾರೆ.

ಇದುವರೆಗಿನ ಪ್ರಶಸ್ತಿ ಪುರಸ್ಕೃತರು: ಶ್ರೀಯುತ ವಿದ್ಯಾಭೂಷಣ್‌, ಅನಂತ ಕುಲಕರ್ಣಿ, ಆರ್‌.ಕೆ. ಶ್ರೀಕಂಠನ್‌, ಆರ್‌.ಕೆ. ಪದ್ಮನಾಭ, ಡಾ. ನಾಗರಾಜ ರಾವ್‌ ಹವಾಲ್ದಾರ್‌, ಬಿ. ಹುಸೇನ್‌ಸಾಬ್‌ ಕನಕಗಿರಿ, ಮುರುಗೋಡು ಶ್ರೀ ಕೃಷ್ಣದಾಸ ಹಾಗೂ ಪ್ರೊ. ಮೈಸೂರು ನಾಗಮಣಿ ಶ್ರೀನಾಥ್‌ ಅವರು ಈಗಾಗಲೇ ಪ್ರಶಸ್ತಿ ಪಡೆದಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next