Advertisement

ವೈಷ್ಣವರ ಪವಿತ್ರ ದಿನ ‘ಶಯನಿ ಏಕಾದಶಿ’

01:31 PM Jul 10, 2022 | Team Udayavani |

ಶಯನಿ ಏಕಾದಶಿಯನ್ನು ಮಹಾ ಏಕಾದಶಿ ಎಂದು ಕರೆಯುತ್ತಾರೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯು ವಿಷ್ಣುವಿನ ಅನುಯಾಯಿಗಳಿಗೆ ಪರಮ ಪವಿತ್ರವಾಗಿದೆ.

Advertisement

ಈ ದಿನದಂದು ಭಗವಾನ್ ಶ್ರೀ ವಿಷ್ಣು ಶೇಷನಾಗನ ಮೇಲೆ ಮಲಗುತ್ತಾನೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ವಿಷ್ಣುವು ಪ್ರಬೋಧಿನಿ ಏಕಾದಶಿಯ ದಿನದಂದು ನಾಲ್ಕು ತಿಂಗಳ ನಂತರ ಅಂತಿಮವಾಗಿ ಎಚ್ಚರಗೊಳ್ಳುತ್ತಾನೆ. ಭಗವಂತನ ಕ್ಷೀರಸಾಗರದಲ್ಲಿ ಮಲಗುವ ಈ ನಾಲ್ಕು ತಿಂಗಳ ಅವಧಿಯನ್ನು ‘ಚಾತುರ್ಮಾಸ್ಯ’ ಎಂದು ಕರೆಯಲಾಗುತ್ತದೆ.

ದೇವಶಯನಿ ಏಕಾದಶಿ ಅಥವಾ ಶಯನಿ ಏಕಾದಶಿಯು ಚಾತುರ್ಮಾಸ್ಯ ಅವಧಿಯ ಆರಂಭವನ್ನು ಸೂಚಿಸುತ್ತದೆ. ಈ ದಿನ, ಭಕ್ತರು ವಿಷ್ಣುವಿನ ಆಶೀರ್ವಾದವನ್ನು ಕೋರಲು ಪವಿತ್ರ ಉಪವಾಸ ಆಚರಿಸುತ್ತಾರೆ. ಹಾಗೆಯೇ ಶಂಖ ಚಕ್ರಾದಿ ಲಾಂಛನಗಳನ್ನು ತಪ್ತ ಮುದ್ರಾಧಾರಣೆಯನ್ನೂ ಮಾಡುತ್ತಾರೆ. ಇದು ಪಾಪಗಳನ್ನು ಸುಡುತ್ತದೆ ಮತ್ತು ಎಲ್ಲಾ ರೀತಿಯ ದುಷ್ಟರಿಂದ ರಕ್ಷಿಸುತ್ತದೆ ಎಂಬುದು ನಂಬಿಕೆ ಆಚರಣೆಯು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಈ ಸಮಯದಲ್ಲಿ ಭಗವಂತನನ್ನು ಪೂಜಿಸಿ “ಸುಪ್ತೇತ್ವಯಿ ಜಗನ್ನಾಥೇ ಜಗತ್ಸುಪ್ತಂಭವೇದಿದಂ ವಿಬುದ್ಧೇತ್ವಯಿ ಬುಧ್ಯೇತ ಪ್ರಸನ್ನೋಮೇ ಭವಾಚ್ಯುತ” ಅಂದರೆ ಹೇ ಜಗನ್ನಾಥನೇ ನೀನು ಮಲಗಿದರೆ ಜಗತ್ತೇ ಮಲಗಿದಂತೆ ಯಾವಾಗ ನೀನು ಎಚ್ಚರಗೊಳ್ಳುತ್ತೀಯೋ ಆಗ ನಾವು ಎಚ್ಚರಗೊಳ್ಳುತ್ತೇವೆ. ಆದ್ದರಿಂದ ಎಲೈ ಅಚ್ಯುತನೇ ನೀನು ಪ್ರಸನ್ನನಾಗು ಎಂದು ಪ್ರಾರ್ಥಿಸಬೇಕು. ಸಂತೋಷ, ಸಮೃದ್ಧಿ ಮತ್ತು ಯಶಸ್ವಿ ಜೀವನದೊಂದಿಗೆ ಈ ವ್ರತವನ್ನು ಆಚರಿಸುವುದರಿಂದ ಭಕ್ತರು ಮೋಕ್ಷವನ್ನು ಸಹ ಪಡೆಯಬಹುದು.

ವೈಷ್ಣವೀ.ಜೆ.ರಾವ್

Advertisement

ತೃತೀಯ ಪತ್ರಿಕೋದ್ಯಮ ವಿಭಾಗ

ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next