Advertisement
ಇದೇ ಜಾಗದಲ್ಲಿ ನಿವೇಶನದಾರರು ತಮ್ಮ ಖಾಲಿ ನಿವೇಶನಕ್ಕೆ ಕೆಂಪು ಮಣ್ಣು ಹಾಕಿರುವುದು ಕರಗಿ ಚರಂಡಿಗೆ ಬಂದು ಚರಂಡಿ ಮುಚ್ಚಿದೆ. ಈಗ ಚರಂಡಿಯಲ್ಲಿ ಹರಿಯಬೇಕಾದ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದ್ದು, ಮಳೆ ಬಂದಾಗ ಕೃತಕ ನೆರೆ ಸೃಷ್ಟಿಯಾಗಿದೆ.ಇಲ್ಲಿನ ಸಮಸ್ಯೆಯ ಕುರಿತು ಎಪ್ರಿಲ್ ಕೊನೆಯ ವಾರದಲ್ಲಿ ಪೌರಾಯುಕ್ತರಿಗೆ ದೂರು ನೀಡಲಾಗಿದ್ದು, ಅನಂತರ ಸತತ 6 ಬಾರಿ ವೈಯಕ್ತಿಕವಾಗಿ ಭೇಟಿ ಮಾಡಿ ವಿನಂತಿಸಿ ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚು ಮಳೆ ಬಂದರೆ ಈ ಮಾರ್ಗದಲ್ಲಿ ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳಿಗೂ ತೊಂದರೆಯಾಗುತ್ತದೆ. ಕೂಡಲೇ ನಗರಸಭೆ ಆಡಳಿತ ಸ್ಪಂದಿಸಬೇಕು ಎಂದು ಸ್ಥಳೀಯ ನಿವಾಸಿ ಎನ್.ಕೆ. ಭಟ್ ಆಗ್ರಹಿಸಿದ್ದಾರೆ.