Advertisement

ಶತರುದ್ರಯಾಗ ಆರಂಭೋತ್ಸವಕ್ಕೆ ಚಾಲನೆ  

04:38 PM Feb 11, 2021 | Team Udayavani |

ಬಾಳೆಹೊನ್ನೂರು: ಮಾನವನ ಬದುಕು ಅನೇಕ ಒತ್ತಡಗಳಿಂದ ಕೂಡಿದೆ. ಸಮಸ್ಯೆ, ಸವಾಲುಗಳ ಮಧ್ಯೆ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ. ಆತ್ಮಬಲ ಮತ್ತು ಮನೋಬಲ ಸಂವರ್ಧನೆಗೆ ಧ್ಯಾನ, ಜ್ಞಾನ ಮತ್ತು  ಆಧ್ಯಾತ್ಮಿಕ ಚಿಂತನೆಗಳು ಅವಶ್ಯಕವಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ|ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

Advertisement

ಶ್ರೀ ರಂಭಾಪುರಿ ಪೀಠದಲ್ಲಿ 30ನೇ ವರ್ಷದ ಪೀಠಾರೋಹಣ ವರ್ಧಂತಿ ಅಂಗವಾಗಿ ಹಮ್ಮಿಕೊಂಡ 5 ದಿನಗಳ ಶತರುದ್ರಯಾಗ ಮಹಾಪೂಜೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಶಾಂತಿ ಮತ್ತು ಕೀರ್ತಿ ಎಲ್ಲರೂ ಬಯಸುವುದು ಸಹಜ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತವಾಗಿರುತ್ತವೆ. ವಿಚಾರ ವಿಮರ್ಶೆಗಳು ನಮ್ಮ ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನಃ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು.

ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗದು. ಆಹಾರ, ನೀರು ದೈಹಿಕ ವಿಕಾಸಗೊಳಿಸಿದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿ ಪಥದತ್ತ ಸಾಗಿಸುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನೀತಿ ಸಂಹಿತೆ ಇಲ್ಲದ ಕಾರಣ ಮನುಷ್ಯ ದಿಕ್ಕು ತಪ್ಪುತ್ತಿರುವುದರಿಂದ ಅಶಾಂತಿಗೆ ಕಾರಣವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಜೀವನ ವ್ಯವಸ್ಥೆಗೆ ಆದರ್ಶವಾದ ದಾರಿ ತೋರಿಸಿದ್ದಾರೆ ಎಂದರು.

ಶತರುದ್ರಯಾಗದ ನೇತೃತ್ವ ವಹಿಸಿದ್ದ ಕಣ್ವಕುಪ್ಪಿ ಗವಿಮಠದ ಡಾ|ನಾಲ್ವಡಿ ಶಾಂತ ಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬೆಳೆಯುವ ಜನಾಂಗದಲ್ಲಿ ದೇವರಲ್ಲಿ ಶೃದ್ಧೆ, ಆಚರಣೆಯಲ್ಲಿ ನಂಬಿಗೆ, ಮಾಡುವ ಕೆಲಸದಲ್ಲಿ ತನ್ಮಯತೆ ಬೆಳೆದು ಬಂದರೆ ಬಾಳು ಉಜ್ವಲಗೊಳ್ಳುವುದು ಎಂದರು.

ಇದನ್ನೂ ಓದಿ :ಕೊಟ್ಟ ಮಾತು ತಪ್ಪಿದ ಬಿಜೆಪಿ ಸರಕಾರ

Advertisement

ಸಿಂಧನೂರು, ಕೆಂಭಾವಿ, ಸಂಗೊಳ್ಳಿ, ಮಸ್ಕಿ, ದೊಡ್ಡಸಗರ ಹಿರೇಮಠ, ದೊಡ್ಡಸಗರ ನಾಗಠಾಣ ಹಿರೇಮಠ, ಚಿಮ್ಮಲಗಿ ಮತ್ತು ಸಾತನೂರು ಶ್ರೀಗಳು ಪಾಲ್ಗೊಂಡಿದ್ದರು. ಪೂಜಾ ಸೇವಾಕರ್ತರಾಗಿ ಚಿಕ್ಕಮಗಳೂರಿನ ಸಿ.ವಿ.ಮಲ್ಲಿಕಾರ್ಜುನ, ಗದಗಿನ ರಾಜು ಮಲ್ಲಾಡದ, ಸೋಮಣ್ಣ ಮಲ್ಲಾಡದ, ಬೆಂಗಳೂರಿನ ಗಣೇಶ ಕುಮಾರ್‌, ಜೆಮ್‌ ಶಿವು, ದಾವಣಗೆರೆಯ ಬಸವರಾಜ-ಭಾರತಿ ಹಾಗೂ ಶಿವಮೊಗ್ಗದ ಶಾಂತಾ ಆನಂದ ಪಾಲ್ಗೊಂಡಿದ್ದರು.

ಬೆಂಗಳೂರಿನ ವೇದ ವಿದ್ವಾಂಸ ಚನ್ನಬಸವಾರಾಧ್ಯರು, ಶಿವಶಂಕರ ಶಾಸ್ತ್ರಿಗಳು, ಹೊನ್ನಪ್ಪಾಜಿ ಶಾಸ್ತ್ರಿಗಳು, ಚಿಕ್ಕಮಗಳೂರಿನ ವಿರೂಪಾಕ್ಷ ಶಾಸ್ತ್ರಿಗಳು, ಹಾಸನದ ದೇವರಾಜ ಶಾಸ್ತ್ರಿಗಳು, ರಂಭಾಪುರಿ ಪೀಠದ ದಾರುಕಾಚಾರ್ಯ ಶಾಸ್ತ್ರಿಗಳು, ಶಿವಪ್ರಕಾಶ ಶಾಸ್ತ್ರಿಗಳು ಶತರುದ್ರಯಾಗ ಪೂಜೆ ಪ್ರಾರಂಭಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next