Advertisement

ಟೆಸ್ಟ್ ತಂಡಕ್ಕೆ ಉಪನಾಯಕನ ಅಗತ್ಯವೇನಿದೆ? ರಾಹುಲ್ ಭವಿಷ್ಯದ ಬಗ್ಗೆ ಶಾಸ್ತ್ರಿ ಅಭಿಪ್ರಾಯ

01:04 PM Feb 26, 2023 | Team Udayavani |

ಮುಂಬೈ: ಭಾರತದ ಟೆಸ್ಟ್ ತಂಡದ ಉಪನಾಯಕ ಸ್ಥಾನವನ್ನು ಕೆಎಲ್ ರಾಹುಲ್ ಕಳೆದುಕೊಂಡಿರುವ ಕುರಿತು ರವಿ ಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟೀಂ ಇಂಡಿಯಾಗೆ ಉಪನಾಯಕನ ಅಗತ್ಯವಿಲ್ಲ ಎಂದು ನಾನು ಯಾವಾಗಲೂ ನಂಬುತ್ತೇನೆ ಎಂದು ಹೇಳಿದರು.

Advertisement

ಸದ್ಯ ನಡೆಯುತ್ತಿರುವ ಬಾರ್ಡರ್- ಗಾವಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಅವರು ತಂಡದ ಉಪ ನಾಯಕರಾಗಿದ್ದರು. ಆದರೆ ಕಳಪೆ ಫಾರ್ಮ್ ನ ಕಾರಣದಿಂದ ಅವರು ಹುದ್ದೆ ಕಳೆದುಕೊಂಡಿದ್ದಾರೆ. ಸದ್ಯ ತಂಡದಲ್ಲಿ ಯಾರನ್ನೂ ಉಪನಾಯಕನ ಸ್ಥಾನಕ್ಕೆ ನೇಮಿಸಲಾಗಿಲ್ಲ.

ಐಸಿಸಿ ಪಾಡ್ ಕಾಸ್ಟ್ ಗೆ ಮಾತನಾಡಿದ ರವಿ ಶಾಸ್ತ್ರಿ, ಟೀಂ ಇಂಡಿಯಾಗೆ ಉಪ ನಾಯಕನ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ರಬಕವಿ-ಬನಹಟ್ಟಿ: ಜನರು ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ ವಿಶ್ವಾಸದಲ್ಲಿದ್ದಾರೆ: ಬೊಮ್ಮಾಯಿ

“ಉಪ ನಾಯಕನ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ನಿರ್ಧಾರ ಮಾಡುತ್ತದೆ. ರಾಹುಲ್ ನ ಫಾರ್ಮ್ ಬಗ್ಗೆ, ಆತನ ಮನಸ್ಥಿತಿಯ ಬಗ್ಗೆ ಅವರಿಗೆ ಗೊತ್ತು. ನನ್ನ ಪ್ರಕಾರ ತವರಿನ ಸರಣಿಗೆ ತಂಡಕ್ಕೆ ಉಪನಾಯಕನ ಅಗತ್ಯವಿಲ್ಲ. ಉತ್ತಮ ತಂಡದೊಂದಿಗೆ ಕಣಕ್ಕಿಳಿಯಲಿ. ಒಂದು ವೇಳೆ ನಾಯಕ ಮೈದಾನದಿಂದ ಹೊರಹಗಬೇಕಾದರೆ ಬೇರೆ ಯಾರ ಬಳಿ ಆ ಕ್ಷಣಕ್ಕೆ ಜವಾಬ್ದಾರಿ ನೀಡಲಿ” ಎಂದಿದ್ದಾರೆ.

Advertisement

“ಉಪನಾಯಕನು ಉತ್ತಮ ಪ್ರದರ್ಶನ ನೀಡದಿದ್ದರೆ ಅವನ ಸ್ಥಾನವನ್ನು ಯಾರಾದರೂ ವಹಿಸಿಕೊಳ್ಳಬಹುದು; ಹೇಗೂ ಉಪನಾಯಕನೆಂಬ ಟ್ಯಾಗ್ ಇರುವುದಿಲ್ಲ. ತವರಿನ ಪರಿಸ್ಥಿತಿಯಲ್ಲಿ ನಾನು ಎಂದಿಗೂ ಉಪನಾಯಕನನ್ನು ಇಷ್ಟಪಡುವುದಿಲ್ಲ” ಎಂದು ಶಾಸ್ತ್ರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next