Advertisement

Powder: ಭರ್ಜರಿ ಫೈಟ್‌ ಮಾಡಿರುವ ಶರ್ಮಿಲಾ ಮಾಂಡ್ರೆ

02:52 PM Aug 22, 2024 | Team Udayavani |

ಯಾವುದೇ ನಟ-ನಟಿಯರಿಗಾಗಲೀ ಒಂದು ವಿಭಿನ್ನ ಪಾತ್ರ ಸಿಕ್ಕಾಗ ಆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿರುತ್ತದೆ. ಈಗ ನಟಿ ಶರ್ಮಿಳಾ ಮಾಂಡ್ರೆ ಕೂಡಾ ಅಂತಹ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಅವರ ನಿರೀಕ್ಷೆಗೆ ಕಾರಣ “ಪೌಡರ್‌’. ಸದ್ಯ ಹಾಡು, ಟೀಸರ್‌, ಟ್ರೇಲರ್‌ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರ ಆ.23ರಂದು ತೆರೆಕಾಣುತ್ತಿದೆ.

Advertisement

ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆಗೆ ವಿಭಿನ್ನವಾದ ಪಾತ್ರ ಸಿಕ್ಕಿದೆ. ಗ್ಲಾಮರ್‌ ಎನ್ನುವುದಕ್ಕಿಂತ ಆ್ಯಕ್ಷನ್‌ ಎನ್ನಬಹುದು. ಚಿತ್ರದಲ್ಲಿ ಅವರು ಭರ್ಜರಿ ಫೈಟ್‌ ಕೂಡಾ ಮಾಡಿದ್ದಾರೆ. ಅದಕ್ಕೆ ಕಾರಣವೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು.

“ನನ್ನ ಪಾತ್ರ ರೆಗ್ಯುಲರ್‌ ಶೈಲಿ ಬಿಟ್ಟಿದೆ. ನನಗಿದು ತೀರಾ ಹೊಸ ಪಾತ್ರ. ಕಥೆ ಹಾಗೂ ನಿರೂಪಣೆಯೇ ತುಂಬಾ ಮಜವಾಗಿದೆ. ಅದರ ಜೊತೆಗೆ ದೊಡ್ಡ ತಾರಾಬಳಗ. ಇಂದಿನ ಯೂತ್ಸ್ಗೆ ಈ ಸಿನಿಮಾ ಹೆಚ್ಚು ಕನೆಕ್ಟ್ ಆಗುತ್ತದೆ’ ಎನ್ನುವುದು ಶರ್ಮಿಳಾ ಮಾಂಡ್ರೆ ಮಾತು.

“ಪೌಡರ್‌’ ಚಿತ್ರದ ಬಗ್ಗೆ ಹೇಳುವುದಾದರೆ, ಇದು ಹಾಸ್ಯಭರಿತ ಚಿತ್ರವಾಗಿದೆ.ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್‌. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ಪೌಡರ್‌ ಹಿಂದಿನ ಪರ್ವ ಅವರಿಗೆ ತಿಳಿಯುವುದೇ? ಇದುವೇ ಕಥೆಯ ಸಾರಾಂಶ.

Advertisement

Udayavani is now on Telegram. Click here to join our channel and stay updated with the latest news.

Next