Advertisement

ನೋಟುಗಳ ಕಾಗದದ ಬಗ್ಗೆ ಮಾಹಿತಿ ಕೊಡಲ್ಲ

10:27 AM May 15, 2017 | Team Udayavani |

ಹೊಸದಿಲ್ಲಿ: ಯಾವ ಕಾರಣಕ್ಕೂ 2,000 ಮತ್ತು 500 ರೂ. ನೋಟುಗಳನ್ನು ಅಚ್ಚು ಮಾಡುವ ಕಾಗದದ ಆಮದಿನ ಕುರಿತು ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ ಎಂದು ನೋಟು ಅಚ್ಚು ಮಾಡುವ ಆರ್‌ಬಿಐ ಹೇಳಿದೆ. ಈ ಕುರಿತ ಮಾಹಿತಿ ಹಕ್ಕು ಕಾಯ್ದೆಯಡಿ ಉತ್ತರಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟು ಮುದ್ರಣ ಸಂಸ್ಥೆ (ಬಿಆರ್‌ಬಿಎನ್‌ಎಂಪಿಎಲ್‌), ‘ಕಾಗದ ಆಮದಿನ ಕುರಿತು ಮಾಹಿತಿ ಬಹಿರಂಗಪಡಿಸಿದರೆ ದೇಶದ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ. ಅಲ್ಲದೇ ಇದೊಂದು ಅಪರಾಧವಾಗುತ್ತದೆ’ ಎಂದಿದೆ. ಹೆಚ್ಚು ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಸರಕಾರ ಕಪ್ಪುಪಟ್ಟಿಗೆ ಸೇರಿರುವ ಕಂಪೆನಿಗಳಿಗೆ ಗುತ್ತಿಗೆ ನೀಡಿದೆ ಎಂಬ ಆರೋಪವಿರುವ ಕಾರಣ ಮಾಹಿತಿ ನೀಡಬೇಕೆಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next