Advertisement

ಶಿಶುನಾಳ ಶರೀಫರು ಸಮಾಜದ ಆಸ್ತಿ: ಚೈತ್ರಾ ಶಿರೂರ 

04:23 PM Jul 05, 2018 | |

ಧಾರವಾಡ: ಸಂತ ಶರೀಫರ ತತ್ವಪದಗಳು ನಾಡಿನಲ್ಲಿ ಭಾವೈಕ್ಯತೆ ಸಾರವಿದ್ದು, ಅವರ ಸತ್ವಪೂರ್ಣ ತತ್ವಪದಗಳು ಯಾವುದೇ ಜಾತಿಗೆ ಮೀಸಲಾಗಿಲ್ಲ ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು. ನಗರದ ಕವಿಸಂನಲ್ಲಿ ಜಾನಪದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಶಿಶುನಾಳ ಶರೀಫ ಜಯಂತಿ ಆಚರಣೆ ಮತ್ತು ಶರೀಫರ ತತ್ವಪದಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಸಮಾಜದಲ್ಲಿಯ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಅವರ ಈ ತತ್ವಪದಗಳು ನಮಗೆ ದಾರಿದೀಪಗಳಾಗಿವೆ. ಶಿಶುನಾಳ ಶರೀಫರಂತಹ ಮಹಾಮಹೀಮರ ತತ್ವ ಆದರ್ಶಗಳನ್ನು, ಅವರ ಹಾಡುಗಳನ್ನು ಕೇಳುವುದೇ ಒಂದು ಭಾಗ್ಯವಾಗಿದೆ. ಅವುಗಳಿಂದ ನಮ್ಮ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ. ಇಂದಿನ ಯುವಜನಾಂಗ ಹಿರಿಯರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಶಕ್ತಿಶಾಲಿ ಸಮಾಜವನ್ನು ಕಟ್ಟುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.

ಡಾ| ಲೋಹಿತ ನಾಯ್ಕರ ಮಾತನಾಡಿ, ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ. ಮನಸ್ಸನ್ನು ಅರಳಿಸಿಕೊಂಡು ನಾವು ಬಾಳಬೇಕಾಗಿದೆ. ಅಭಿವೃದ್ಧಿ ಎಂದರೆ ಬಾಹ್ಯವಾದದ್ದು ಅಲ್ಲ. ನಮ್ಮಲ್ಲಿಯ ಒಳ್ಳೆಯ ಗುಣಗಳು ಸಮೃದ್ಧಿಯಾಗಿ ಹೊರಹೊಮ್ಮಬೇಕಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿದರು. ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಕಂಬಳಿ, ಪ್ರಭು ಕುಂದರಗಿ, ಜಿ.ಟಿ.ದೊಡಮನಿ, ಮೈತ್ರಾ ಭಜಂತ್ರಿ, ಸುನಂದಾ ನಿಂಬನಗೌಡರ, ಆಶಾ ಸೈಯ್ಯದ, ಖೈರುನ್ನಿಸಾ ತಂಡದವರು ಹಾಗೂ ಡಾ| ಪ್ರಭಾ ನೀರಲಗಿ ಮತ್ತು ತಂಡದವರು ಸಂತ ಶಿಶುನಾಳ ಶರೀಫರ ಗೀತೆಗಳನ್ನು ಹಾಡಿದರು. ವಿಶ್ವೇಶ್ವರಿ ಹಿರೇಮಠ, ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಪ್ರಕಾಶ ಉಡಿಕೇರಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next