Advertisement

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

12:00 AM Sep 09, 2024 | Team Udayavani |

ಮಲ್ಪೆ: ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೂ ಮೆಹಂದಿ ಕಾರ್ಯಕ್ರಮದಲ್ಲಿ ಕರ್ಕಶವಾಗಿ ಡಿಜೆ ಸೌಂಡ್‌ ಹಾಕಿದ್ದ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

Advertisement

ಸೆ. 5ರಂದು ರಾತ್ರಿ ಸಂಚಾರ ಪೊಲೀಸ್‌ ಮೇಲಧಿಕಾರಿಗಳ ಸೂಚನೆ ಮೇರೆಗೆ ಕಲ್ಯಾಣಪುರ ಮೂಡುಬೆಟ್ಟು ಗ್ರಾಮದ ಶೇಖರ್‌ ಬೈಕಾಡಿ ಅವರ ಮಗಳ ಮದುವೆ ಮೆಹಂದಿ ಕಾರ್ಯಕ್ರಮಕ್ಕೆ ಮಲ್ಪೆ ಠಾಣೆಯ ಗಸ್ತು ನಿರತ ಪೊಲೀಸರು ದಾಳಿ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೂ ಡಿಜೆ ಸೌಂಡ್ಸ್‌ ಬಳಸಿ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಗೆ ನೆಮ್ಮದಿ ಭಂಗ ಉಂಟು ಮಾಡಿದ್ದ ಶೇಖರ್‌ ಬೈಕಾಡಿ ಮತ್ತು ಡಿಜೆ ಸೌಂಡ್ಸ್‌ ಒದಗಿಸಿದ್ದ ನಂದಾದೀಪ ಸಿಸ್ಟಂ ಮಾಲಕ ನವೀನ್‌ ಅವರ ವಿರುದ್ಧ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next