ಮುಂಬಯಿ: ಅಮೆರಿಕದ ಫೆಡರಲ್ ರಿಸರ್ವ್ ಶೇ.75 ಬೇಸಿಸ್ ಪಾಯಿಂಟ್ಸ್ ಗಳಷ್ಟು ಬಡ್ಡಿದರ ಏರಿಕೆ ಹಾಗೂ ಸದ್ಯ ಆರ್ಥಿಕ ಹಿಂಜರಿಕೆ ಭಯ ಇಲ್ಲ ಎಂಬ ಹೇಳಿಕೆಯಿಂದಾಗಿ ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಗುರುವಾರ(ಜುಲೈ 28) ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಒಂದು ಸಾವಿರಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಹತ್ಯೆಯಲ್ಲಿ ಕೇರಳದವರು ಭಾಗಿಯಾಗಿರುವ ಸಂಶಯ: ಪ್ರವೀಣ್ ನಿವಾಸದತ್ತ ಸಿಎಂ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 1,041.47 ಅಂಕಗಳಷ್ಟು ಏರಿಕೆಯೊಂದಿಗೆ 56,857.79 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 287.80 ಅಂಕಗಳಷ್ಟು ಏರಿಕೆಯಾಗಿದ್ದು, 16,929.60 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಹೂಡಿಕೆದಾರರಿಗೆ ಭರ್ಜರಿ ಲಾಭವಾಗಿದ್ದು, ಬಾಂಬೆ ಷೇರು ಮಾರುಕಟ್ಟೆಯ ವಹಿವಾಟು 259.71 ಲಕ್ಷ ಕೋಟಿಯಿಂದ 262.53 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ವರದಿ ತಿಳಿಸಿದೆ.
ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಟಾಟಾ ಸ್ಟೀಲ್, ಕೋಟಕ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಆಲ್ಟ್ರಾಟೆಕ್ ಸಿಮೆಂಟ್, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್, ಐಟಿಸಿ ಮತ್ತು ಸನ್ ಫಾರ್ಮಾ ಷೇರುಗಳು ನಷ್ಟ ಕಂಡಿದೆ.