ಮುಂಬಯಿ:ನೂತನ ಆರ್ಥಿಕ ವರ್ಷ ಆರಂಭದ ಹಿನ್ನೆಲೆಯ ಪರಿಣಾಮ ಮುಂಬಯಿ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಸಂವೇದಿ ಸೂಚ್ಯಂಕ 520 ಅಂಕ ಏರಿಕೆಯೊಂದಿಗೆ ಗುರುವಾರ(ಏಪ್ರಿಲ್ 01)ದ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 521 ಅಂಕ ಏರಿಕೆಯಾಗಿ 50,030ರ ಗಡಿಗೆ ತಲುಪುವ ಮೂಲಕ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 177 ಅಂಕ ಏರಿಕೆಯಾಗಿ 14,867ರ ಗಡಿ ಮುಟ್ಟಿದೆ.
ಜೆಎಸ್ ಡಬ್ಲ್ಯು ಸ್ಟೀಲ್ ಷೇರು ಶೇ.7.9ರಷ್ಟು ಲಾಭಗಳಿಸಿದ್ದು, ಟಾಟಾ ಸ್ಟೀಲ್ ಶೇ.5.8ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ.4.3ರಷ್ಟು, ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ.2.9ರಷ್ಟು ಲಾಭಗಳಿಸಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 391.14 ಅಂಕ ಏರಿಕೆಯಾಗಿದ್ದು, 49,900.29 ಅಂಕಗಳ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 113.55 ಅಂಕ ಏರಿಕೆಯಾಗಿ 14,804.25ರ ಗಡಿ ತಲುಪಿತ್ತು.
ಸೆನ್ಸೆಕ್ಸ್ ಏರಿಕೆಯಿಂದ ಎಚ್ ಸಿಎಲ್ ಟೆಕ್, ಟೈಟಾನ್, ಇಂಡಸ್ ಇಂಡ್ ಬ್ಯಾಂಕ್, ಎನ್ ಟಿಪಿಸಿ, ಬಜಾಜ್ ಆಟೋ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿತ್ತು. ನೆಸ್ಲೆ, ಐಟಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಯುಎಲ್ ಷೇರುಗಳು ನಷ್ಟ ಅನುಭವಿಸಿತ್ತು.