ಮುಂಬಯಿ:ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ನಿರ್ಧರಿಸಿರುವುದಾಗಿ ಘೋಷಿಸಿದ ಪರಿಣಾಮ ಗುರುವಾರ (ಫೆ.10) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 460 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಚಾಮುಂಡೇಶ್ವರಿಗೆ ನಾನೇ ಬರುತ್ತೇನೆ !; ಪತ್ನಿ ಸ್ಪರ್ಧೆ ಬೇಡ ಎಂದು ಚರ್ಚೆ: ಹೆಚ್ ಡಿಕೆ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 460.06 ಅಂಕ ಏರಿಕೆಯಾಗಿದ್ದು, 58,926.03 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 142 ಅಂಕ ಏರಿಕೆ ಕಂಡಿದ್ದು 17,605.80 ಅಂಕಗಳ ಮಟ್ಟ ತಲುಪಿದೆ.
ಒಎನ್ ಜಿಸಿ, ಟಾಟಾ ಸ್ಟೀಲ್, ಇನ್ಫೋಸಿಸ್, ಎಸ್ ಬಿಐ ಲೈಫ್ ಇನ್ಸೂರೆನ್ಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಮಾರುತಿ ಸುಜುಕಿ, ಬಿಪಿಸಿಎಲ್, ಶ್ರೀಸಿಮೆಂಟ್ಸ್, ಐಒಸಿ ಮತ್ತು ಆಲ್ಟ್ರಾಟೆಕ್ ಸಿಮೆಂಟ್ ಷೇರು ನಷ್ಟ ಕಂಡಿದೆ.
ಆರ್ ಬಿಐ ಹಣಕಾಸು ನೀತಿಯನ್ನು ಪ್ರಕಟಿಸುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿಯೇ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿತ್ತು.