ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ಷೇರು ವಹಿವಾಟಿನ ಪರಿಣಾಮ ಸೋಮವಾರ(ಸೆಪ್ಟೆಂಬರ್ 06) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 260 ಅಂಕಗಳ ಏರಿಕೆಯೊಂದಿಗೆ 58,390.21 ಅಂಕಗಳ ವಹಿವಾಟಿನೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದೆ.
ಇದನ್ನೂ ಓದಿ:ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಹುತೇಕ ಖಚಿತ
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 75 ಅಂಕಗಳ ಏರಿಕೆಯೊಂದಿಗೆ ಆರಂಭಿಕ ವಹಿವಾಟಿನಲ್ಲಿಯೇ 17,399.35 ಅಂಕಗಳೊಂದಿಗೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 260.26 ಅಂಕಗಳ ಏರಿಕೆಯೊಂದಿಗೆ 58,390.21 ಅಂಕಗಳಲ್ಲಿ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ ಕೂಡಾ 75.75 ಅಂಕ ಏರಿಕೆಯೊಂದಿಗೆ 17,399.35 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಆಟೋ, ಎಲ್ ಆ್ಯಂಡ್ ಟಿ, ಎಚ್ ಯುಎಲ್, ಮಹೀಂದ್ರ ಆ್ಯಂಡ್ ಮಹೀಂದ್ರ, ಡಾ.ರೆಡ್ಡೀಸ್ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ಲಾಭ ಗಳಿಸಿದೆ. ಏಷ್ಯನ್ ಪೇಂಟ್ಸ್, ಟಿಸಿಎಸ್, ಪವರ್ ಗ್ರಿಡ್, ಟೈಟಾನ್ ಮತ್ತು ಟೆಕ್ ಮಹೀಂದ್ರ ಷೇರುಗಳು ನಷ್ಟ ಕಂಡಿವೆ.