ಮುಂಬಯಿ: ಜಾಗತಿಕ ಷೇರುಪೇಟೆಯ ಮಿಶ್ರ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ(ಜನವರಿ13) 85.26 ಅಂಕಗಳಷ್ಟು ಅಲ್ಪ ಪ್ರಮಾಣದ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ನಟಿ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್: ನಟ ದಿಲೀಪ್ ಮನೆಗಳ ಮೇಲೆ ಪೊಲೀಸರ ದಾಳಿ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 85.26 ಅಂಕ ಏರಿಕೆಯಾಗಿದ್ದು, 61,235.30 ಅಂಕಗಳಲ್ಲಿ ದಾಖಲೆ ಪ್ರಮಾಣದಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 45.45 ಅಂಕಗಳಷ್ಟು ಏರಿಕೆಯೊಂದಿಗೆ 18,257.80 ಅಂಕ ತಲುಪಿದೆ.
ಟಾಟಾ ಸ್ಟೀಲ್, ಸನ್ ಫಾರ್ಮಾ, ಎಲ್ ಆ್ಯಂಡ್ ಟೀ, ಮಹೀಂದ್ರ ಆ್ಯಂಡ್ ಮಹೀಂದ್ರ, ಪವರ್ ಗ್ರಿಡ್, ಬಜಾಜ್ ಫಿನ್ ಸರ್ವ್, ಟಿಸಿಎಸ್ ಹಾಗೂ ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ವಿಪ್ರೋ, ಏಷ್ಯನ್ ಪೇಂಟ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ , ಎಚ್ ಸಿಎಲ್ ಟೆಕ್ ಷೇರುಗಳು ನಷ್ಟ ಕಂಡಿದೆ.
ಶಾಂಘೈ, ಟೋಕಿಯೊ ಮತ್ತು ಸಿಯೋಲ್ ಷೇರುಮಾರುಕಟ್ಟೆ ವಹಿವಾಟು ನಷ್ಟ ಕಂಡಿದ್ದು, ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಏರಿಕೆ ಕಂಡಿದೆ. ಯುರೋಪ್ ಷೇರುಮಾರುಕಟ್ಟೆ ವಹಿವಾಟು ನೆಗೆಟಿವ್ ಟ್ರೆಂಡಿಂಗ್ ನಲ್ಲಿದೆ.