ಮುಂಬಯಿ:ಜಾಗತಿಕ ಷೇರುಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಪರಿಣಾಮ ಮುಂಬಯಿ ಷೇರುಪೇಟೆಯ ಶುಕ್ರವಾರ(ಮಾರ್ಚ್ 12)ದ ಆರಂಭಿಕ ವಹಿವಾಟಿನಲ್ಲಿಯೇ 500ಕ್ಕೂ ಅಧಿಕ ಅಂಕಗಳ ಭರ್ಜರಿ ಏರಿಕೆ ಕಂಡಿದೆ.
ಇದನ್ನೂ ಓದಿ:ಆರ್ಥಿಕತೆ ಚೇತರಿಕೆ : ಐಪಿಒ ತೆರೆಯಲಿದೆ ಕಲ್ಯಾಣ್ ಜ್ಯುವೆಲರ್ಸ್..!
ಮುಂಬಯಿ ಷೇರುಪೇಟೆಯ ಬಿಎಸ್ ಇ ಸಂವೇದಿ ಸೂಚ್ಯಂಕ 503.28 ಅಂಕಗಳ ಏರಿಕೆಯೊಂದಿಗೆ 51,782.79 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 144.35 ಅಂಕಗಳ ಏರಿಕೆಯೊಂದಿಗೆ 15,319.15 ಅಂಕಗಳ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯಿಂದ ಎಲ್ ಆ್ಯಂಡ್ ಟಿ, ಒಎನ್ ಜಿಸಿ, ಎನ್ ಟಿಪಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್ ಬಿಐ, ಇನ್ಫೋಸಿಸ್ ಮತ್ತು ಟಿಸಿಎಸ್ ಷೇರುಗಳು ಲಾಭ ಗಳಿಸಿವೆ.
ಮತ್ತೊಂದೆಡೆ ಬಜಾಜ್ ಆಟೋ, ಸನ್ ಫಾರ್ಮಾ, ಎಚ್ ಯುಎಲ್ ಮತ್ತು ಮಾರುತಿ ಷೇರುಗಳು ನಷ್ಟ ಕಂಡಿದೆ. ಬುಧವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 254.03 ಅಂಕಗಳ ಏರಿಕೆ ಕಂಡು 51,279.51 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯವಾಗಿತ್ತು. ನಿಫ್ಟಿ ಕೂಡಾ 15,174.80ರ ಗಡಿ ತಲುಪಿತ್ತು.