ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ನಡುವೆಯೇ ಬುಧವಾರ(ಅಕ್ಟೋಬರ್ 13) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಇದನ್ನೂ ಓದಿ:ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ ಮತ್ತು ಪ್ರತಿಕ್ರಿಯೆ ಆಗುತ್ತದೆ: ಸಿಎಂ ಬಸವರಾಜ್ ಬೊಮ್ಮಾಯಿ
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 60,621.72 ಅಂಕಗಳಷ್ಟು ದಾಖಲೆ ಪ್ರಮಾಣದ ಏರಿಕೆಯ ವಹಿವಾಟು ನಡೆಸಿದೆ. ಅದೇ ರೀತಿ ಮಧ್ಯಂತರ ವಹಿವಾಟಿನಲ್ಲಿ ಎನ್ ಎಸ್ ಇ ನಿಫ್ಟಿ 97.75 ಅಂಕಗಳಷ್ಟು ಏರಿಕೆಯಾಗಿದ್ದು, 18,089.70 ಅಂಕಗಳ ಸಾರ್ವಕಾಲಿಕ ದಾಖಲೆ ಮಟ್ಟ ಮುಟ್ಟಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಮಹೀಂದ್ರ ಆ್ಯಂಡ್ ಮಹೀಂದ್ರ, ಪವರ್ ಗ್ರಿಡ್, ಭಾರ್ತಿ ಏರ್ ಟೆಲ್, ಎಲ್ ಆ್ಯಂಡ್ ಟಿ, ಐಸಿಐಸಿಐ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ನೆಸ್ಲೆ ಇಂಡಿಯಾ, ಎಚ್ ಯುಎಲ್, ಎಚ್ ಸಿಎಲ್ ಟೆಕ್, ಎಸ್ ಬಿಐ ಮತ್ತು ಟಾಟಾ ಸ್ಟೀಲ್ ಷೇರು ನಷ್ಟ ಕಂಡಿದೆ.
ಮಂಗಳವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 148.53 ಅಂಕಗಳಷ್ಟು ಏರಿಕೆಯೊಂದಿಗೆ 60,284.31 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 46 ಅಂಕ ಏರಿಕೆಯಾಗಿದ್ದು, 17,991.95 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.