ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಸೋಮವಾರ(ಜುಲೈ05) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 395 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:“ಮಹಾ” ವಿಧಾನಸಭೆಯಲ್ಲಿ ಕೋಲಾಹಲ, ಅನುಚಿತ ವರ್ತನೆ: 12 ಬಿಜೆಪಿ ಶಾಸಕರು ಒಂದು ವರ್ಷ ಅನರ್ಹ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 395.33 ಅಂಕಗಳಷ್ಟು ಏರಿಕೆಯಾಗಿದ್ದು, 52,880 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 112.15 ಅಂಕಗಳ ಏರಿಕೆಯೊಂದಿಗೆ 15,834ರ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್, ಎಲ್ ಆ್ಯಂಡ್ ಟೀ, ಬಜಾಜ್ ಫಿನ್ ಸರ್ವ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.
ಮತ್ತೊಂದೆಡೆ ಟೆಕ್ ಮಹೀಂದ್ರ, ಡಾ.ರೆಡ್ಡೀಸ್, ಎಚ್ ಸಿಎಲ್ ಟೆಕ್ ಮತ್ತು ಟೈಟಾನ್ ಷೇರುಗಳು ನಷ್ಟ ಕಂಡಿದೆ. ಶಾಂಘೈ ಮತ್ತು ಸಿಯೋಲ್ ಷೇರು ಮಾರುಕಟ್ಟೆ ಲಾಭದೊಂದಿಗೆ ವಹಿವಾಟು ಮುಕ್ತಾಯಗೊಳಿಸಿದ್ದು, ಹಾಂಗ್ ಕಾಂಗ್, ಟೋಕಿಯೋ ಷೇರುಪೇಟೆ ಸೆನ್ಸೆಕ್ಸ್ ಇಳಿಕೆ ಕಂಡಿದೆ.