ಮುಂಬಯಿ:ಕೋವಿಡ್ 19 ಲಸಿಕೆ ದೇಶದ ಜನರಿಗೆ ನೀಡುವಷ್ಟು ಸಂಗ್ರಹ ಇದೆ ಎಂಬ ಕೇಂದ್ರ ಸರ್ಕಾರದ ಭರವಸೆ ಮುಂಬಯಿ ಷೇರುಪೇಟೆ ಖರೀದಿದಾರರ ಮೇಲೆ ಪರಿಣಾಮ ಬೀರಿದ್ದು, ಸತತ ಮೂರನೇ ದಿನವಾದ ಬುಧವಾರವೂ(ಮಾರ್ಚ್ 03) ಸಂವೇದಿ ಸೂಚ್ಯಂಕ ಏರಿಕೆ ಕಂಡಿದೆ.
ಇದನ್ನೂ ಓದಿ:ಮಸ್ಕ್ ಅವರ ಸ್ಟಾರ್ ಲಿಂಕ್ ಸ್ಯಾಟಲೈಟ್ ಇಂಟರ್ ನೆಟ್ ಸೇವೆ 2022ರಲ್ಲಿ ಭಾರತಕ್ಕೆ ಲಭ್ಯ..?!
ವಿದೇಶಗಳಿಗೆ ಭಾರತ ಕೋವಿಡ್ 19 ಲಸಿಕೆಯನ್ನು ರಫ್ತು ಮಾಡಿದ ಬಳಿಕವೂ ದೇಶದಲ್ಲಿ ಸಾಕಷ್ಟು ಪ್ರಮಾಣದ ಕೋವಿಡ್ 19 ಲಸಿಕೆ ಇದ್ದಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ(ಮಾರ್ಚ್ 02) ತಿಳಿಸಿತ್ತು.
ಎನ್ ಎಸ್ ಇ ನಿಫ್ಟಿ ಸೂಚ್ಯಂಕ ಕೂಡಾ 0.88ರಷ್ಟು ಏರಿಕೆಯಾಗಿದ್ದು, 15.046.55ರ ಗಡಿ ತಲುಪಿದೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 0.8ರಷ್ಟು ಹೆಚ್ಚಳವಾಗುವ ಮೂಲಕ 50,699.74 ಅಂಕಗಳ ವಹಿವಾಟು ನಡೆಸಿದೆ.
ಕೇಂದ್ರದ ಲಸಿಕೆ ಭರವಸೆಯಿದ ರಿಲಯನ್ಸ್ ಇಂಡಸ್ಟ್ರೀಸ್ ನ ನಿಫ್ಟಿ ಇಂದಿನ ವಹಿವಾಟಿನಲ್ಲಿ ಹೆಚ್ಚಿನ ಲಾಭ ಗಳಿಸಿದೆ. ಏರ್ ಟೆಲ್ ಹಾಗೂ ವೊಡಾಫೋನ್ ಷೇರುಗಳು ಲಾಭ ಗಳಿಸಿದೆ.