ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಸೋಮವಾರ (ಜನವರಿ 29) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 896 ಅಂಕಗಳ ಏರಿಕೆಯೊಂದಿಗೆ ವಹಿವಾಟು ಮುಂದುವರಿಸಿದೆ.
ಇದನ್ನೂ ಓದಿ:CAA :7 ದಿನಗಳಲ್ಲಿ ದೇಶಾದ್ಯಂತ ಸಿಎಎ ಕಾಯ್ದೆ ಜಾರಿ: ಕೇಂದ್ರ ಸಚಿವ ಠಾಕೂರ್ ಭರವಸೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 896 ಅಂಕಗಳಷ್ಟು ಏರಿಕೆಯೊಂದಿಗೆ ದಾಖಲೆಯ 71,637.61 ಅಂಕಗಳೊಂದಿಗೆ ವಹಿವಾಟು ಮುಂದುವರಿದಿದೆ. ಅದೇ ರೀತಿ ನಿಫ್ಟಿ 291 ಅಂಕ ಜಿಗಿತ ಕಂಡಿದ್ದು, 21,429.60 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಓಎನ್ ಜಿಸಿ, ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಕೋಲ್ ಇಂಡಿಯಾ ಸೇರಿದಂತೆ 37 ಷೇರುಗಳು ಲಾಭ ಗಳಿಸಿದೆ. ಮತ್ತೊಂದೆಡೆ ಸಿಪ್ಲಾ, ಡಾ.ರೆಡ್ಡೀಸ್ ಲಾಬೋರೇಟರೀಸ್, ಇನ್ಫೋಸಿಸ್, ಎಲ್ ಟಿಐ ಮೈಂಡ್ ಟ್ರೀ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ನಷ್ಟ ಕಂಡಿದೆ.
ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಭರ್ಜರಿ ಖರೀದಿಯಾಗಿದ್ದವು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು ಹೆಚ್ಚಿನ ಲಾಭ ಗಳಿಸಿದ್ದು, ಫೈನಾನ್ಶಿಯಲ್ ಸರ್ವಿಸಸ್, ಆಟೋ, ಇಂಧನ ಮತ್ತು ಅನಿಲ ಸೆಕ್ಟರ್ ನ ಷೇರುಗಳು ಲಾಭ ಕಂಡಿದೆ.