ಮುಂಬಯಿ:ಜಾಗತಿಕ ಷೇರು ಮಾರುಕಟ್ಟೆಯ ಅನಿಶ್ಚಿತ ವಹಿವಾಟಿನ ನಡುವೆಯೇ ಮುಂಬಯಿ ಷೇರು ಮಾರುಕಟ್ಟೆಯ ಗುರುವಾರ(ಫೆ.18, 2021)ದ ವಹಿವಾಟು ಚೇತರಿಕೆಯ ಹಾದಿ ಹಿಡಿದಿದ್ದು, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಸ್ ಬಿಐ ಷೇರುಗಳು ಲಾಭ ಗಳಿಸಿದೆ.
ಮುಂಬಯಿ ಷೇರುಪೇಟೆಯ ಬಿಎಸ್ಇ ಸಂವೇದಿ ಸೂಚ್ಯಂಕ 61.08 ಅಂಕಗಳ ಅಲ್ಪ ಏರಿಕೆಯೊಂದಿಗೆ 51,764.91 ಅಂಕಗಳ ವಹಿವಾಟು ಆರಂಭಿಸಿದೆ. ಎನ್ ಎಸ್ ಇ ನಿಫ್ಟಿ 18.20 ಅಂಕಗಳ ಏರಿಕೆಯೊಂದಿಗೆ 15,227.10 ಅಂಕಗಳ ಗಡಿ ತಲುಪಿದೆ.
ಮುಂಬಯಿ ಷೇರುಪೇಟೆ ಅಲ್ಪ ಚೇತರಿಕೆಯಿಂದ ಒಎನ್ ಜಿಸಿ, ಟೆಕ್ ಮಹೀಂದ್ರಾ, ಎಸ್ ಬಿಐ, ಇನ್ಫೋಸಿಸ್, ಎಚ್ ಸಿಎಲ್ ಟೆಕ್ ಮತ್ತು ಏಷ್ಯನ್ ಪೈಂಟ್ಸ್ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿವೆ.
ಬುಧವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 400.34 ಅಂಕಗಳಷ್ಟು ಕುಸಿತ ಕಂಡಿದ್ದು, 51,703.83 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 104.55 ಅಂಕಗಳಷ್ಟು ಕುಸಿತ ಕಂಡಿತ್ತು.