ಮುಂಬಯಿ:ಅಮೆರಿಕದ ಹಣದುಬ್ಬರದ ಏರಿಳಿಕೆಯ ಕಳವಳದ ನಡುವೆಯೂ ಹೂಡಿಕೆದಾರರ ಖರೀದಿಯ ಭರಾಟೆಯ ಪರಿಣಾಮ ಬುಧವಾರ (ಸೆಪ್ಟೆಂಬರ್ 15) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಹಾಗೂ ನಿಫ್ಟಿ ದಾಖಲೆಯ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.
ಇದನ್ನೂ ಓದಿ:ಶಿಕ್ಷಣವಿಲ್ಲದೇ ಕಾಡಿನಲ್ಲಿ ಅಲೆಯುತ್ತಿದ್ದ ಹಾಡಿ ಮಕ್ಕಳ ಮನೆ ಬಾಗಿಲಿಗೇ ಬಂತು ಶಾಲೆ!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 476 ಅಂಕ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 58,723.20 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 139 ಅಂಕ ಏರಿಕೆಯೊಂದಿಗೆ ದಾಖಲೆಯ 17,519.45 ಅಂಕಗಳ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಜಿಗಿತದ ಪರಿಣಾಮ ಎನ್ ಟಿಪಿಸಿ, ಭಾರ್ತಿ ಏರ್ ಟೆಲ್, ಎಚ್ ಸಿಎಲ್ ಟೆಕ್, ಟೈಟಾನ್, ಎಸ್ ಬಿಐ, ಪವರ್ ಗ್ರಿಡ್, ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳು ಭರ್ಜರಿ ಲಾಭಗಳಿಸಿವೆ.
ಆ್ಯಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಆಲ್ಟ್ರಾಟೆಕ್ ಸಿಮೆಂಟ್, ನೆಸ್ಲೆ ಇಂಡಿಯಾ, ಸನ್ ಫಾರ್ಮಾ, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿವೆ.