ಮುಂಬೈ: ಜಾಗತಿಕ ವಿದ್ಯಮಾನಗಳ ನಡುವೆಯೂ ಗುರುವಾರ (ಆ.22) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ವಹಿವಾಟು ಮುಂದುವರಿದಿದೆ.
ಗುರುವಾರದ ಷೇರುಪೇಟೆಯ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್ 245.98 ಅಂಕ ಏರಿಕೆಯೊಂದಿಗೆ 81,151.28 ಅಂಕಗಳಲ್ಲಿ ವಹಿವಾಟು ನಡೆದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 73.85 ಅಂಕಗಳ ಜಿಗಿತದೊಂದಿಗೆ 24,844.05 ಅಂಕಗಳ ಗಡಿ ತಲುಪಿದೆ.
ಷೇರುಪೇಟೆ ಸೂಚ್ಯಂಕ, ನಿಫ್ಟಿ ಏರಿಕೆಯಿಂದ ಗ್ರಾಸಿಂ, ಭಾರ್ತಿ ಏರ್ ಟೆಲ್, ಟಾಟಾ ಕನ್ಸೂಮರ್, ಆಲ್ಟ್ರಾ ಟೆಕ್ ಸಿಮೆಂಟ್ ಮತ್ತು ಟೈಟಾನ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಡಾ.ರೆಡ್ಡೀಸ್, ಟಾಟಾ ಮೋಟಾರ್ಸ್, ಎನ್ ಟಿಪಿಸಿ, ಸಿಪ್ಲಾ ಮತ್ತು ಹಿಂಡಲ್ಕೋ ಷೇರುಗಳು ನಷ್ಟ ಕಂಡಿವೆ.
ಜೊಮಾಟೋ(Zomato) ಇಂದು ಪೇಟಿಎಂನ ಎಂಟರ್ಟೈನ್ ಮೆಂಟ್ ಮತ್ತು ಟಿಕೆಟಿಂಗ್ ವ್ಯವಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಲ್ಲದೇ ಟಿವಿಎಸ್ ಮೋಟಾರ್ ಕಂಪನಿ ಟಿವಿಎಸ್ ಜ್ಯುಪಿಟರ್ 110 ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಟಿವಿಎಸ್ ಷೇರು ಶೇ.2.22ರಷ್ಟು ಜಿಗಿತ ಕಂಡಿದೆ.