ಮುಂಬಯಿ: ಮುಂಬಯಿ ಷೇರುಪೇಟೆಯಲ್ಲಿನ ಸೆನ್ಸೆಕ್ಸ್ ಏರಿಕೆಯ ನಂತರ ಹೂಡಿಕೆದಾರರು ಹೆಚ್ಚಿನ ಮಟ್ಟದಲ್ಲಿ ಲಾಭ ಪಡೆದ ಹಿನ್ನೆಲೆಯಲ್ಲಿ ಮಂಗಳವಾರ(ಮೇ 25) ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸಮನಾಂತರ ವಹಿವಾಟಿನಲ್ಲಿ ಕೊನೆಗೊಂಡಿದೆ.
ಇದನ್ನೂ ಓದಿ:ನಿಯಮ ಉಲ್ಲಂಘಿಸಿ ಮದುವೆ:ಅಧಿಕಾರಿಗಳನ್ನು ಕಂಡು ವೇದಿಕೆಯಲ್ಲೇ ವಧುವನ್ನು ಬಿಟ್ಟು ವರ ಎಸ್ಕೇಪ್!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 14.37 ಅಂಕಗಳ ಅಲ್ಪ ಏರಿಕೆಯೊಂದಿಗೆ 50,637.53 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ. ಎನ್ ಎಸ್ ಇ ನಿಫ್ಟಿ ಕೂಡಾ 10.75 ಅಂಕಗಳ ಏರಿಕೆಯೊಂದಿಗೆ 15,208.45ರ ಗಡಿ ದಾಟಿದೆ.
ಏಷ್ಯನ್ ಪೇಂಟ್ಸ್, ಟೈಟಾನ್, ಬಜಾಜ್ ಫಿನ್ ಸರ್ವ್, ಒಎನ್ ಜಿಸಿ, ಇನ್ಫೋಸಿಸ್ ಮತ್ತು ಟಿಸಿಎಸ್ ಷೇರುಗಳು ಹೆಚ್ಚಿನ ಲಾಭಗಳಿಸಿದೆ. ಅಲ್ಲದೇ ಎಚ್ ಡಿಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿಎಫ್ ಸಿ, ಐಟಿಸಿ ಷೇರುಗಳು ನಷ್ಟ ಅನುಭವಿಸಿದೆ.
ದೇಶೀಯವಾಗಿ ಷೇರುಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಸೆನ್ಸೆಕ್ಸ್ ಏರಿಕೆಯಾಗಿದ್ದು, ಹೂಡಿಕೆದಾರರಲ್ಲಿ ಭರವಸೆ ಮೂಡಿಸಿತ್ತು. ಇದರಿಂದಾಗಿ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆದಿರುವುದಾಗಿ ರಿಲಯನ್ಸ್ ಸೆಕ್ಯುರಿಟೀಸ್ ನ ಬಿನೋದ್ ಮೋದಿ ತಿಳಿಸಿದ್ದಾರೆ.