ಮುಂಬಯಿ: ಅಮೆರಿಕದ ಫೆಡರಲ್ ರಿಸರ್ವ್ ನೀತಿ ನಿರ್ಣಯಕ್ಕಿಂತ ಮೊದಲೇ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 90 ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ
ಬುಧವಾರ(ಜೂ.16) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 90.5 ಅಂಕ ಕುಸಿತ ಕಂಡಿದ್ದು, 52,682.55 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 23.55 ಅಂಕ ಕುಸಿದು 15,845.79ರ ಗಡಿ ತಲುಪಿದೆ.
ಸೆನ್ಸೆಕ್ಸ್ ಕುಸಿತದ ಪರಿಣಾಮ ಪವರ್ ಗ್ರಿಡ್, ಡಾ.ರೆಡ್ಡೀಸ್, ಟೈಟಾನ್, ಎಚ್ ಡಿಎಫ್ ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಒಎನ್ ಜಿಸಿ, ಬಜಾಜ್ ಫಿನ್ ಸರ್ವ್, ಹಿಂದೂಸ್ತಾನ್ ಯೂನಿಲಿವರ್, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ.
ಮಂಗಳವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 221.52 ಅಂಕ ಏರಿಕೆಯೊಂದಿಗೆ 52,773.05 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿತ್ತು. ನಿಫ್ಟಿ ಕೂಡಾ 57.40 ಅಂಕ ಏರಿಕೆಯಾಗಿ 15,869.25ರ ಗಡಿ ದಾಟಿತ್ತು.