ಮುಂಬಯಿ: ಸತತವಾಗಿ ಏರಿಕೆ, ಇಳಿಕೆ ಕಾಣುತ್ತಿರುವ ನಡುವೆಯೇ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ (ಮಾರ್ಚ್ 25) 233 ಅಂಕ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಮುಸ್ಲಿಂ ಸಮುದಾಯದಲ್ಲಿ ಮತಾಂಧ ಶಕ್ತಿಗಳು ತಲೆಯೆತ್ತಲು ಕಾಂಗ್ರೆಸ್ ಕಾರಣ: ಆರಗ ಜ್ಞಾನೇಂದ್ರ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 233 ಅಂಕ ಕುಸಿತ ಕಂಡಿದ್ದು, 57,362 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 70 ಅಂಕಗಳಷ್ಟು ಇಳಿಕೆಯಾಗಿದ್ದು, 17,153 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 192 ಅಂಕ ಏರಿಕೆಯಾಗಿದ್ದು, 57,788.25 ಅಂಕಗಳಲ್ಲಿ ವಹಿವಾಟು ನಡೆದಿತ್ತು. ನಿಫ್ಟಿ ಕೂಡಾ 66 ಅಂಕ ಜಿಗಿತದೊಂದಿಗೆ 17,289 ಅಂಕಗಳ ಮಟ್ಟ ತಲುಪಿತ್ತು.
ಕೋಟಕ್ ಮಹೀಂದ್ರ ಬ್ಯಾಂಕ್ ಲಿಮಿಟೆಡ್, ಎಚ್ ಡಿಎಫ್ ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಬಂಧನ್ ಬ್ಯಾಂಕ್ ಲಿ, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಡಾ.ರೆಡ್ಡೀಸ್ ಲ್ಯಾಬೋರೇಟರಿ, ಕೋಲ್ ಇಂಡಿಯಾ, ಆಲ್ಟ್ರಾ ಸಿಮೆಂಟ್, ಹಿಂಡಲ್ಕೋ, ಜೆಎಸ್ ಡಬ್ಲ್ಯು ಸ್ಟೀಲ್ ಷೇರು ಲಾಭಗಳಿಸಿದೆ.