Advertisement

ವಿಶ್ವಾದ್ಯಂತ ಷೇರು ಮಾರುಕಟ್ಟೆ ಕುಸಿತ

02:31 AM Mar 11, 2023 | Team Udayavani |

ವಾಷಿಂಗ್ಟನ್‌: ವಿಶ್ವದ ಷೇರು ಮಾರುಕಟ್ಟೆ ಕುಸಿತಗೊಂಡಿದೆ. ಇದರ ಪರಿಣಾಮ ಭಾರತದ ಷೇರು ಮಾರುಕಟ್ಟೆ ಮೇಲೂ ಪ್ರತಿಫ‌ಲಿಸಿದೆ. ಶುಕ್ರವಾರ ಬೆಳಗ್ಗೆ ಭಾರತದ ಹೂಡಿಕೆದಾರರಿಗೆ 2.67 ಲಕ್ಷ ಕೋಟಿ ರೂ. ನಷ್ಟವಾಗಿದೆ.

Advertisement

ಜಾಗತಿಕ ಮಾರುಕಟ್ಟೆಯಲ್ಲೂ ಹಿಂಜರಿಕೆ ಕಂಡುಬಂದಿದ್ದರಿಂದ, ಹೆಚ್ಚಿನ ಷೇರುದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಿದರು. ಇದರ ಪರಿಣಾಮ ಬಿಎಸ್‌ಇ ಪಟ್ಟಿ ಮಾಡಿರುವ ಕಂಪೆನಿಗಳ ಮಾರುಕಟ್ಟೆ ಬಂಡವಾಳದಲ್ಲಿ ಕುಸಿತ ಕಂಡುಬಂತು. ಭಾರತದಲ್ಲಿ ಶುಕ್ರವಾರ ಸೆನ್ಸೆಕ್ಸ್‌ 671.15 ಪಾಯಿಂಟ್ಸ್‌ ಇಳಿಕೆಯಾಗಿ, ದಿನದ ಅಂತ್ಯಕ್ಕೆ 59,135.13 ತಲುಪಿತು. ಅದೇ ರೀತಿ ನಿಫ್ಟಿ 176.70 ಪಾಯಿಂಟ್ಸ್‌ ಇಳಿಕೆಯಾಗಿ, ದಿನದ ಅಂತ್ಯಕ್ಕೆ 17,412.90 ದಾಖಲಿಸಿತು. ಇನ್ನೊಂದೆಡೆ ಲಂಡನ್‌, ಶಾಂಘೈ, ಫ್ರಾಂಕ್‌ಫ‌ರ್ಟ್‌ ಮತ್ತು ಟೋಕಿಯೊ ಮಾರುಕಟ್ಟೆಯಲ್ಲಿ ಕೂಡ ಷೇರು ಮಾರುಕಟ್ಟೆ ಕುಸಿತ ಅನುಭವಿಸಿತು. ಜಾಗತಿಕ ತೈಲ ಬೆಲೆ‌ ಕೂಡ ಇಳಿಕೆ ಕಂಡಿತು. ಅಮೆರಿಕದಲ್ಲಿ ಉದ್ಯೋಗ ಕಡಿತದ ಪರಿಣಾಮ ಷೇರು ಮಾರುಕಟ್ಟೆ ಮೇಲೆ ಬೀರಿತು.

Advertisement

Udayavani is now on Telegram. Click here to join our channel and stay updated with the latest news.

Next