Advertisement

US elections ಎಫೆಕ್ಟ್:‌ ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ

11:35 AM Nov 04, 2024 | |

ಮುಂಬೈ: ನವೆಂಬರ್‌ 5ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ(US Presidential Election) ಚುನಾವಣೆ ಹಾಗೂ ಫೆಡರಲ್‌ ರಿಸರ್ವ್‌ ಬಡ್ಡಿ ದರ ನಿರ್ಧಾರದ ಕುರಿತ ನಿರ್ಣಯದ ಕಳವಳ ಬಾಂಬೆ ಷೇರುಪೇಟೆ(Stock Market) ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಸೋಮವಾರ (ನ.04) ಷೇರುಪೇಟೆ ಸಂವೇದಿ ಸೂಚ್ಯಂಕ 1,000ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.

Advertisement

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್‌ ಬರೋಬ್ಬರಿ 1,308.48 ಅಂಕಗಳಷ್ಟು ಕುಸಿತ ಕಂಡಿದ್ದು, 78,392.48 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ನಿಫ್ಟಿ ಕೂಡಾ 24,000 ಅಂಕಗಳಿಗಿಂತ ಕೆಳಕ್ಕೆ ಕುಸಿದಿದೆ.

1,308 ಅಂಕಗಳ ಕುಸಿತದಿಂದಾಗಿ ಕೇವಲ 15 ನಿಮಿಷಗಳಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂಪಾಯಿ ಲಾಭಾಂಶ ಕಳೆದುಕೊಳ್ಳುವಂತಾಗಿದೆ.  ಎನ್‌ ಎಸ್‌ ಇ ನಿಫ್ಟಿ 454 ಅಂಕಗಳಷ್ಟು ಇಳಿಕೆ ಕಂಡಿದ್ದು, 23,850 ಅಂಕಗಳ ಮಟ್ಟಕ್ಕೆ ಕುಸಿದಿದೆ.

ಸೂಚ್ಯಂಕ, ನಿಫ್ಟಿ ಕುಸಿತದ ಪರಿಣಾಮ ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೋಸಿಸ್‌, ಐಸಿಐಸಿಐ ಬ್ಯಾಂಕ್‌, ಎಚ್‌ ಡಿಎಫ್‌ ಸಿ ಬ್ಯಾಂಕ್‌, ಸನ್‌ ಫಾರ್ಮಾ ಷೇರುಗಳು ನಷ್ಟ ಕಂಡಿದೆ. ಅದೇ ರೀತಿ ಎಲ್‌ ಆಂಡ್‌ ಟಿ, ಆಕ್ಸಿಸ್‌ ಬ್ಯಾಂಕ್‌, ಟಿಸಿಎಸ್‌, ಟಾಟಾ ಮೋಟಾರ್ಸ್‌ ಷೇರುಗಳು ಕುಸಿತ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next