ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಸೋಮವಾರ (ಡಿಸೆಂಬರ್ 13) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 350ಕ್ಕೂ ಅಧಿಕ ಅಂಕ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.
ಇದನ್ನೂ ಓದಿ:ವಿಷ್ಣು ಸ್ಮರಣೆಯೊಂದಿಗೆ ‘ಬಂಧನ 2’ ಆರಂಭ: ಲವ್-ಆ್ಯಕ್ಷನ್‌ನಲ್ಲಿ ಆದಿತ್ಯ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 375.30 ಅಂಕಗಳಷ್ಟು ಏರಿಕೆಯೊಂದಿಗೆ 59,161.97 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 94.75 ಅಂಕ ಏರಿಕೆಯಾಗಿದ್ದು, 17, 606.05 ಅಂಕಗಳ ಮಟ್ಟ ತಲುಪಿದೆ.
ಪವರ್ ಗ್ರಿಡ್, ಆ್ಯಕ್ಸಿಸ್ ಬ್ಯಾಂಕ್, ಎನ್ ಟಿಪಿಸಿ, ಟಾಟಾ ಸ್ಟೀಲ್, ಆಲ್ಟ್ರಾ ಟೆಕ್ ಸಿಮೆಂಟ್, ಸನ್ ಫಾರ್ಮಾ ಮತ್ತು ಟೈಟಾನ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಫೈನಾನ್ಸ್, ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಕಂಡಿದೆ.
ಶುಕ್ರವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಖಮ 20.46 ಅಂಕಗಳಷ್ಟು ಅಲ್ಪ ಕುಸಿತದೊಂದಿಗೆ 58,786.67 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 5.55ರಷ್ಟು ಇಳಿಕೆಯೊಂದಿಗೆ 17,511.30 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.