ಮುಂಬೈ: 2024ರ ಸಾಲಿನಲ್ಲಿ ಅಮೆರಿಕದ ಫೆಡರಲ್ ಬಡ್ಡಿದರ ಕಡಿತಕ್ಕೆ ಸಂಬಂಧಿಸಿದಂತೆ ಅಮೆರಿಕದ ಫೆಡ್ ಜರೋಮ್ ಪೂವೆಲ್ ಯಾವುದೇ ಟೈಮ್ ಫ್ರೇಮ್ ಅನ್ನು ನಿಗದಿಪಡಿಸದಿರುವ ಹಿನ್ನೆಲೆಯಲ್ಲಿ ಗುರುವಾರ(ಜುಲೈ11)ವೂ ಬಾಂಬೆ ಷೇರುಪೇಟೆಯ ಬೆಳಗ್ಗಿನ ವಹಿವಾಟು ಕುಸಿತದೊಂದಿಗೆ ಆರಂಭಗೊಂಡಿದೆ.
ಇದನ್ನೂ ಓದಿ:ವಿದೇಶಿ ಉತ್ಪನ್ನಗಳನ್ನು ತಂದು ಅಕ್ರಮವಾಗಿ ಮಾಲ್‌ಗಳಿಗೆ ಮಾರುತ್ತಿದ್ದ ಆರೋಪಿ ಸೆರೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 244.73 ಅಂಕಗಳ ಕುಸಿತದೊಂದಿಗೆ 79,680.05 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ನಿಫ್ಟಿ 24,250 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಬಿಎಸ್ ಇ, ಎನ್ ಎಸ್ ಇ ಕುಸಿತದ ನಡುವೆಯೂ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್, ರೈಲ್ ವಿಕಾಸ್ ನಿಗಮ್ ಲಿ, ಇಂಡೇಜೆನ್ ಲಿಮಿಟೆಡ್, ಎಚ್ ಪಿಎಲ್ ಎಲೆಕ್ಟ್ರಿಕ್ & ಪವರ್ ಲಿಮಿಡೆಡ್, ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಎಚ್ ಡಿಎಫ್ ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಕಂಡಿರುವುದಾಗಿ ವರದಿ ತಿಳಿಸಿದೆ.
ಇಂದಿನ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಅಂಬುಜಾ ಸಿಮೆಂಟ್ಸ್ ಷೇರು ಬೆಲೆ ಶೇ.3.5ರಷ್ಟು ಏರಿಕೆ ಕಂಡಿತ್ತು. ಅಂಬುಜಾ ಸಿಮೆಂಟ್ ಪ್ರತಿ ಷೇರಿನ ಬೆಲೆ 688 ರೂಪಾಯಿ. ಈ ಹಿಂದೆ ಕಂಪನಿ ಟಾರ್ಗೆಟ್ ಪ್ರೈಸ್ ಅನ್ನು ಇನ್ನಷ್ಟು ಕಡಿಮೆ ಮಾಡಿತ್ತು ಎಂದು ವರದಿ ತಿಳಿಸಿದೆ.